ಕ್ಯಾಪಿಟಲ್ ದಾಳಿ ತಡೆದಿದ್ದ ಮತ್ತಿಬ್ಬರು ಪೊಲೀಸರ ಆತ್ಮಹತ್ಯೆ!

masthmagaa.com:

ಇದೇ ವರ್ಷ ಜನವರಿ 6ನೇ ತಾರೀಕು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ದಾಳಿ ನಡೆಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈ ದಾಳಿಯನ್ನು ತಡೆಯೋಕೆ ಯತ್ನಿಸಿದ್ದ, ಕ್ಯಾಪಿಟಲ್ ಕಟ್ಟಡಕ್ಕೆ ರಕ್ಷಣೆ ನೀಡಿದ್ದ ಮತ್ತಿಬ್ಬರು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ಈ ಘಟನೆಯಂದು ಕ್ಯಾಪಿಟಲ್ ಹಿಲ್ ಕಟ್ಟಡ ಕಾದಿದ್ದ ಒಟ್ಟು 4 ನಾಲ್ವರು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ ಅಂತ ಕೊಲಂಬಿಯಾದ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಅಂದಹಾಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಗೆದ್ದ ಬಳಿಕ ಟ್ರಂಪ್ ಬೆಂಬಲಿಗರು ಜನವರಿ 6ರಂದು ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ದಾಳಿ ನಡೆಸಿದ್ರು. ಇದ್ರಲ್ಲಿ ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಪ್ರಾಣ ಕಳ್ಕೊಂಡಿದ್ರು. ನೂರಾರು ಪೊಲೀಸರು ಗಾಯಗೊಂಡಿದ್ರು. ಘಟನೆ ಸಂಬಂಧ ಈವರೆಗೆ ಒಟ್ಟು 500 ಮಂದಿಯನ್ನು ಅರೆಸ್ಟ್ ಕೂಡ ಮಾಡಲಾಗಿದೆ. ಆದ್ರೀಗ ಈ ವೇಳೆ ಕ್ಯಾಪಿಟಲ್ ಕಟ್ಟಡಕ್ಕೆ ರಕ್ಷಣೆ ನೀಡಿದ್ದವರು ಪ್ರಾಣ ಕಳೆದುಕೊಳ್ತಿರೋದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.

-masthmagaa.com

Contact Us for Advertisement

Leave a Reply