ಪಾಕ್‌ ಸೇನೆ ಮೇಲೆ ಅಫ್ಘಾನ್‌ ಉಗ್ರರ ದಾಳಿ! 2 ಪಾಕ್‌ ಸೈನಿಕರ ಸಾವು!

masthmagaa.com:

ಇನ್ನು ತಾಲಿಬಾನ್‌ಗಳ ಜೊತೆಗೆ ಪಾಕ್‌ ಸೇನೆ ಕಿರಿಕ್‌ ಮಾಡ್ಕೊಂಡಿದ್ದೇ ತಡ ಪಾಕಿಸ್ತಾನದಲ್ಲಿ ದಿನವೂ ಉಗ್ರದಾಳಿಯಾಗ್ತಿದೆ. ಈಗ ಶುಕ್ರವಾರ ಹೊಸ ದಾಳಿಯಾಗಿದ್ದು ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ. ಪಾಕಿಸ್ತಾನದ ನಾರ್ತ್‌ವೆಸ್ಟ್‌ ಅಥ್ವಾ ವಾಯುವ್ಯ ಭಾಗದಲ್ಲಿರೋ ಪಾಕ್‌ ಸೇನಾ ಬೆಂಗಾವಲು ಪಡೆ ಮೇಲೆ ಅಫ್ಘಾನ್‌ ಉಗ್ರರು ದಾಳಿ ನಡೆಸಿರೋ ಪರಿಣಾಮ ಕನಿಷ್ಠ ಇಬ್ಬರು ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ. ಹಾಗೂ 22 ಮಂದಿ ಪಾಕ್‌ ಸೈನಿಕರು ಗಾಯಗೊಂಡಿದ್ದಾರೆ. ಹೀಗಂತ ಪಾಕ್‌ ಸೇನೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply