ದೇಶದ 90 ಕೋಟಿ ಜನರಿಗೆ ಕೊರೋನಾ ಬಂದು ಹೋಗಿದ್ಯಾ..? ಸೆರೋ ಸರ್ವೇ ಶಾಕಿಂಗ್ ವರದಿ

masthmagaa.com:

ಕೊರೋನಾ ಸಂಬಂಧ ಕೇಂದ್ರ ಸರ್ಕಾರದ 4ನೇ ಸುತ್ತಿನ ಸೆರೋ ಸರ್ವೇಯ ಫಲಿತಾಂಶ ಹೊರಬಿದ್ದಿದೆ. ಇದ್ರ ಪ್ರಕಾರ ದೇಶದ 3ನೇ 2ರಷ್ಟು ಅಂದ್ರೆ 67.6 ಪರ್ಸೆಂಟ್ ಜನರಲ್ಲಿ ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ. ದೇಶದ 21 ರಾಜ್ಯಗಳಲ್ಲಿ ಜೂನ್ ಜುಲೈ ತಿಂಗಳಲ್ಲಿ 6ರಿಂದ 17 ವರ್ಷವರನ್ನೂ ಒಳಪಡಿಸಿ ಈ ಸರ್ವೇ ನಡೆಸಲಾಗಿತ್ತು. 7252 ಮಂದಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ 36227 ಮಂದಿ ಈ ಸರ್ವೇಯಲ್ಲಿ ಭಾಗಿಯಾಗಿದ್ರು. ಇದ್ರಿಂದ ದೇಶದ 67.6 ಪರ್ಸೆಂಟ್ ಅಂದ್ರೆ ಹತ್ತತ್ರ 90 ಕೋಟಿಯಷ್ಟು ಜನರಲ್ಲಿ ಕೊರೋನಾ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗಿವೆ ಅಂತ ಗೊತ್ತಾಗಿದೆ. ಸಮೀಕ್ಷೆಯಲ್ಲಿ ಭಾಗಿಯಾದ 6ರಿಂದ 9 ವರ್ಷದವರಲ್ಲಿ 67.6%, ಅದೇ 10ರಿಂದ 17 ವರ್ಷದವರಲ್ಲಿ 61.6 ಪರ್ಸೆಂಟ್, 18ರಿಂದ 44 ವರ್ಷದವರಲ್ಲಿ 66.7 ಪರ್ಸೆಂಟ್ ಮತ್ತು 45ರಿಂದ 60 ವರ್ಷದವರಲ್ಲಿ 77.6 ಪರ್ಸೆಂಟ್​​ನಷ್ಟು ಜನರಲ್ಲಿ ಪ್ರತಿಕಾಯ ವೃದ್ಧಿಯಾಗಿದೆ. ಆರೋಗ್ಯ ಕಾರ್ಯಕರ್ತರ ಪೈಕಿ 85 ಪರ್ಸೆಂಟ್​ನಷ್ಟು ಮಂದಿಯಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಇವರಲ್ಲಿ ಹಲವರು ಲಸಿಕೆ ಪಡೆದಿದ್ರೆ, ಇನ್ನು ಕೆಲವರಲ್ಲಿ ಕೊರೋನಾ ಬಂದು ಹೋಗಿದೆ. ಇದ್ರ ಅರ್ಥ 40 ಕೋಟಿಯಷ್ಟು ಜನರಲ್ಲಿ ಇನ್ನೂ ಕೂಡ ಕೊರೋನಾ ವಿರುದ್ಧ ಪ್ರತಿಕಾಯ ವೃದ್ಧಿಯಾಗಿಲ್ಲ. ಅಂಥವರು ಕೊರೋನಾಗೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರೂ ಕೊರೋನಾ ರೂಲ್ಸ್ ಫಾಲೋ ಮಾಡ್ಬೇಕು ಅಂತ ಐಸಿಎಂಆರ್ ಮುಖ್ಯಸ್ಥ ಬಲರಾಂ ಭಾರ್ಗವ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply