ಕಾಬೂಲ್​​ನಲ್ಲಿ ಕೊನೆ ಹಂತದ ಸ್ಥಳಾಂತರ ಕಾರ್ಯಾಚರಣೆ!

masthmagaa.com:

ಅಮೆರಿಕ ಸ್ಥಳಾಂತರ ಪ್ರಕ್ರಿಯೆಯ ಕೊನೆಯ ಹಂತಕ್ಕೆ ಬಂದಿದೆ. ಇನ್ನು ಏರ್​ಪೋರ್ಟ್​ನಲ್ಲಿ ಸಾವಿರ ಮಂದಿ ಮಾತ್ರ ಇದ್ದು, ಯೋಧರ ಸ್ಥಳಾಂತರಕ್ಕೂ ಮುನ್ನ ಅವರನ್ನು ಸ್ಥಳಾಂತರಿಸಲಾಗುತ್ತೆ. ಸದ್ಯ ಏರ್​ಪೋರ್ಟ್​ನಲ್ಲಿ ಅಮೆರಿಕದ 4 ಸಾವಿರ ಮಂದಿ ಯೋಧರಿದ್ದಾರೆ. ಅದೇ ರೀತಿ ತಾಲಿಬಾನಿಗಳು ಕಾಬೂಲ್ ಏರ್​ಪೋರ್ಟ್​​​​​ನ್ನು ನಂತರದಲ್ಲಿ ಕಂಟ್ರೋಲ್​​ಗೆ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ. ಆದ್ರೆ ಅಮೆರಿಕ ಕಾರ್ಯಾಚರಣೆ ಅಂತ್ಯಗೊಳಿಸಲು ಡೇಟ್ ಮತ್ತು ಟೈಮನ್ನು ಇನ್ನೂ ನಿಗದಿಪಡಿಸಿಲ್ಲ ಅಂತ ಕೂಡ ಮೂಲಗಳು ತಿಳಿಸಿವೆ. ಅಮೆರಿಕ ಈವರೆಗೆ ಒಟ್ಟು 1.12 ಲಕ್ಷ ಜನರನ್ನು ಸ್ಥಳಾಂತರ ಮಾಡಿದೆ. ಇನ್ನು ಬ್ರಿಟನ್​​ ನಿನ್ನೆಗೆ ಸ್ಥಳಾಂತರ ಪ್ರಕ್ರಿಯೆ ಅಂತ್ಯಗೊಳಿಸಿದೆ. ಕೊನೆಯ ವಿಮಾನ ನಿನ್ನೆ ಕಾಬೂಲ್ ಏರ್​ಪೋರ್ಟ್​ನಿಂದ ಹಾರಿದೆ. ಈವರೆಗೆ ಒಟ್ಟು 15 ಸಾವಿರ ಜನರನ್ನು ಸ್ಥಳಾಂತರ ಮಾಡಿದೀವಿ ಅಂತ ಬ್ರಿಟನ್ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply