ತೈವಾನ್​​​​ಗೆ ಅಮೆರಿಕ ಬೆಣ್ಣೆ! ಚೀನಾಗೆ ಬೈಡೆನ್ ಗುನ್ನ!

masthmagaa.com:

ಬೈಡೆನ್ ಅಧ್ಯಕ್ಷರಾದ ಬಳಿಕ ಎಲ್ಲಾ ದೇಶಗಳ ಜೊತೆಗೆ ಅಮೆರಿಕದ ಕಿರಿಕ್ ಕೂಡ ಜಾಸ್ತಿಯಾಗ್ತಿದೆ. ನಿನ್ನೆಯಷ್ಟೇ ಹೇಳದೇ ಕೇಳದೇ ಭಾರತದ ಲಕ್ಷದ್ವೀಪದತ್ತ ಯುದ್ಧ ನೌಕೆ ಕಳುಹಿಸಿದ್ದ ಅಮೆರಿಕ, ಇವತ್ತು ಹೊಸದೊಂದು ಗೈಡ್​​ಲೈನ್ಸ್​​ ಬಿಡುಗಡೆ ಮಾಡಿದೆ. ಅದರ ಪ್ರಕಾರ ಅಮೆರಿಕದ ಅಧಿಕಾರಿಗಳು ತೈವಾನ್ ಅಧಿಕಾರಿಯನ್ನು ಭೇಟಿಯಾಗುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಅಂದ್ರೆ ಸುಲಭವಾಗಿ ಅಮೆರಿಕದ ಅಧಿಕಾರಿಗಳು ತೈವಾನ್ ಅಧಿಕಾರಿಗಳನ್ನು ಭೇಟಿಯಾಗಬಹುದಾಗಿದೆ. ಈ ಹೊಸ ಮಾರ್ಗಸೂಚಿ ತೈವಾನ್ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಗಟ್ಟಿ ಮಾಡಲು ಅಧಿಕಾರಿಗಳಿಗೆ ಅವಕಾಶ ನೀಡಲಿದೆ ಅಂತ ಕೂಡ ಅಮೆರಿಕ ತಿಳಿಸಿದೆ. ತೈವಾನ್ ನನಗೆ ಸೇರಿದ್ದು, ಅದರ ಜೊತೆಗೆ ಯಾವುದೇ ರಾಷ್ಟ್ರಗಳು ಸಂಬಂಧ ಹೊಂದಬಾರದು ಅಂತ ಚೀನಾ ಪದೆ ಪದೇ ಹೇಳುತ್ತಲೇ ಇದೆ. ಜೊತೆಗೆ ಈ ದ್ವೀಪರಾಷ್ಟ್ರದ ಸುತ್ತಮುತ್ತ ಚೀನಾ ಸೇನಾ ಚಟುವಟಿಕೆ ಅಂದ್ರೆ, ಯುದ್ಧ ನೌಕೆ ಕಳುಹಿಸೋದು, ಆಗಾಗ ಯುದ್ಧ ವಿಮಾನಗಳನ್ನು ಕಳುಹಿಸೋದು ಹೀಗೆಲ್ಲಾ ಕಿರಿಕಿರಿ ಮಾಡ್ತಾನೇ ಇರುತ್ತೆ.

-masthmagaa.com

Contact Us for Advertisement

Leave a Reply