ಅಂತರಾಷ್ಟ್ರೀಯ ಬಹ್ಯಾಕಾಶಕ್ಕೆ ಮೊದಲ ಅರಬ್ಬೀ ಗಗನ ಯಾತ್ರಿಕ!

masthmagaa.com:

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ತನ್ನ ಮೊದಲ ಅರಬ್ಬೀ ಗಗನ ಯಾತ್ರಿಯನ್ನ ಅಂತರಾಷ್ಟ್ರೀಯ ಬಹ್ಯಾಕಾಶಕ್ಕೆ ಕಳುಹಿಸ್ತೇವೆ ಅಂತ ಘೋಷಿಸಿದೆ. ಸುಮಾರು 6 ತಿಂಗಳು ಕಾಲ ಅಂದ್ರೆ 180ದಿನಗಳ ಸುದೀರ್ಘ ಅಧ್ಯಯನಕ್ಕಾಗಿ ಗಗನ ಯಾತ್ರಿಯನ್ನ ಕಳುಹಿಸಲಾಗ್ತಇದೆ. ಈ ಒಪ್ಪಂದಕ್ಕೆ ಯುಎಇ ಉಪಾಧ್ಯಕ್ಷ, ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ಸಹಿ ಹಾಕಿರೋದ್ರ ಕುರಿತು ಅವರು ಟ್ವೀಟ್‌ ಮಾಡಿದ್ದಾರೆ. ಇನ್ನು ಯುಎಇಯ ‘ದ ನ್ಯಾಶನಲ್‌ ನ್ಯೂಸ್‌ ಪೇಪರ್‌’ ಪ್ರಕಾರ, ಮಹಮದ್‌ ಬಿನ್‌ ರಶೀದ್‌ ಸ್ಪೇಸ್‌ ಸೆಂಟರ್‌ ಮತ್ತು ಆಕ್ಸಿಯಮ್ ಸ್ಪೇಸ್, ವಾಷಿಂಗ್ಟನ್‌ನಲ್ಲಿರುವ ಎಮಿರಾಟಿ ರಾಯಭಾರ ಕಚರಿಯಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ ಅರಬ್ಬೀ ಗಗನಯಾತ್ರಿ ಸ್ಪೇಸ್‌ಎಕ್ಸ್ ಕ್ರ್ಯೂ-6 ಮಿಷನ್‌ನ ಭಾಗವಾಗಿರಲಿದ್ದು, ಇದು 2023ರಲ್ಲಿ ಉಡಾವಣೆಯಾಗಲಿದೆ ಅಂತ ಹೇಳಲಾಗ್ತ ಇದೆ.

-maasthmagaa.com

Contact Us for Advertisement

Leave a Reply