ದುಬೈನಲ್ಲಿ ಬೆತ್ತಲೆ ಫೋಟೋಶೂಟ್ ಮಾಡಿ ಸಿಕ್ಕಾಕೊಂಡವ್ರು ಗಡಿಪಾರು

masthmagaa.com:

ಯುಎಇನ ದುಬೈನಲ್ಲಿ ಕಳೆದ ವಾರ ಕಟ್ಟಡವೊಂದರ ಬಾಲ್ಕನಿಯಲ್ಲಿ ಬೆತ್ತಲೆ ಫೋಟೋಶೂಟ್ ಮಾಡಿದ್ದವರನ್ನ ದೇಶದಿಂದ ಗಡಿಪಾರು ಮಾಡೋದಾಗಿ ಯುಎಇ ಹೇಳಿದೆ. ದುಬೈ ಮರೀನಾ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಮಹಿಳೆಯೊಬ್ಬಳು ಬೆತ್ತಲೆಯಾಗಿ ಫೋಟೋಗ್ರಾಫರ್​ಗೆ ಪೋಸ್​ ಕೊಡ್ತಿದ್ದಳು. ಅದು ಅಕ್ಕಪಕ್ಕ ಬಿಲ್ಡಿಂಗ್​ನಲ್ಲಿದ್ದವರಿಗೂ ಕಾಣಿಸಿತ್ತು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುಎಇ ಸಂಸ್ಕೃತಿಗೆ ಇದು ವಿರುದ್ಧ ಅಂತ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.

ಆ ಗುಂಪಿನಲ್ಲಿದ್ದವರನ್ನ ಅರೆಸ್ಟ್ ಮಾಡಲಾಗಿತ್ತು. ಇದೀಗ ದೇಶದಿಂದ ಹೊರಹಾಕೋದಾಗಿ ಸರ್ಕಾರ ಹೇಳಿದೆ. ಅವರೆಲ್ಲಾ ಯಾವ ದೇಶ ಪ್ರಜೆಗಳು ಅನ್ನೋದು ಬಹಿರಂಗಪಡಿಸಿಲ್ಲ. ದುಬೈನ ಬೀಚ್, ಲಕ್ಸುರಿ ಲೈಫ್​ಸ್ಟೈಲ್​ ಪ್ರವಾಸಿಗರನ್ನ ಸೆಳೆಯುತ್ತೆ. ಹೀಗೆ ಬರೋ ಪ್ರವಾಸಿಗರು ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ನಡೆದುಕೊಳ್ಳಬೇಕಲಾ.. ಆದ್ರೆ ಸಾರ್ವಜನಿಕ ಸ್ಥಳಗಳಲ್ಲಿ ಕಿಸ್ ಮಾಡಿ, ಮದ್ಯಪಾನ ಮಾಡಿ ಸಿಕ್ಕಾಕ್ಕೊಳ್ತಾರೆ. ಇತ್ತೀಚೆಗೆ ಯುಎಇ ಸರ್ಕಾರ ಕೂಡ ಕೆಲವೊಂದು ಕಾನೂನುಗಳನ್ನ ಸಡಿಲ ಮಾಡುವ ಮೂಲಕ ವಿದೇಶಿ ಬಂಡವಾಳ ಮತ್ತು ಪ್ರವಾಸೋದ್ಯಮವನ್ನ ಅಟ್ರಾಕ್ಟ್ ಮಾಡಲು ಪ್ರಯತ್ನಿಸುತ್ತಿದೆ. ಆದ್ರೀಗ ಬೆತ್ತಲೆ ಫೋಟೋಶೂಟ್ ಮಾಡಿದವ್ರು ಸಿಕ್ಕೊಂಡುಬಿದ್ದು ಗಡಿಪಾರಿಗೆ ರೆಡಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply