ಮಂಗಳ ಗ್ರಹ ಸಮೀಪ ತಲುಪಿದ ಅರಬ್ಬರ ನೌಕೆ!

masthmagaa.com:

ಯುನೈಟೆಡ್ ಅರಬ್ ಎಮಿರೇಟ್ಸ್​ನ ಮಾನವರಹಿತ ಬಾಹ್ಯಾಕಾಶ ನೌಕೆ ಮಂಗಳನ ಸಮೀಪ ತಲುಪಿದೆ. ಇದು ಅರಬ್ ಜಗತ್ತಿನ ಮೊದಲ ಮಂಗಳಯಾನ. ಮೊದಲ ಭೂಮಿಯ ಹೊರಗಿನ ಯಾನ ಇದರ ಹೆಸರು ಅಮಲ್ ಅಂತಾ… ಅರೇಬಿಕ್​ನಲ್ಲಿ ಅಮಲ್​​​ ಅಂದ್ರೆ ಹೋಪ್​, ಭರವಸೆ ಅಂತ. 7 ತಿಂಗಳಲ್ಲಿ 48 ಕೋಟಿ 28 ಲಕ್ಷ ಕಿಲೋಮೀಟರ್​​ ಕ್ರಮಿಸಿ ಈಗ ಮಂಗಳ ಗ್ರಹದ ಸಮೀಪ ತಲುಪಿದೆ ಈ ಅಮಲ್. ಮಂಗಳನ ವಾತಾವರಣವನ್ನ ಮ್ಯಾಪ್ ಮಾಡುವ ಉದ್ದೇಶ ಇಟ್ಟಕೊಂಡು ಇದರ ಉಡಾವಣೆ ಮಾಡಿದೆ ಯುಎಇ. ಮಂಗಳ – ಭೂಮಿಗೆ ಹತ್ತಿರ ಬಂದಿರೋ ಈ ಅಪರೂಪದ ಅವಕಾಶವನ್ನ ಬಳಸಿಕೊಂಡು ಹಲವು ದೇಶಗಳು ಏಕಕಾಲದಲ್ಲಿ ಮಾರ್ಸ್ ಮಿಶನ್ ಕೈಗೊಂಡಿವೆ. ಮೊದಲು ಯುಎಇಯ ಗಗನ ನೌಕೆ ಮಂಗಳನ ಹತ್ತಿರ ಹೋಗಿದೆ. ಇನ್ನು ಮುಂದಿನ ಒಂದು ವಾರದಲ್ಲಿ ಚೀನಾ ಹಾಗೂ ಅಮೆರಿಕದ ಮಿಷನ್​ಗಳೂ ಮಂಗಳನ ಅಂಗಳ ತಲುಪಲಿವೆ. ಇನ್ನೆರಡು ದಿನಗಳಲ್ಲಿ ಚೀನಾದ ಮಿಷನ್ ರೀಚ್ ಆಗುತ್ತೆ. ಅದರಲ್ಲಿ ಮೇಲೆ ಮಂಗಳನ ಸುತ್ತ ತಿರುಗೋ ಆರ್ಬಿಟರ್ ಮಾತ್ರ ಅಲ್ಲ..

ಮಂಗಳನ ಸರ್ಫೇಸ್ ಮೇಲೆ ಲ್ಯಾಂಡ್ ಆಗಿ ತನಿಖೆ ನಡೆಸೋ ಲ್ಯಾಂಡರ್ ಕೂಡ ಇರುತ್ತೆ. ಇನ್ನು ಅಮೆರಿಕದ ಮಿಷನ್​ನಲ್ಲೂ ಮಂಗಳನ ಮೇಲೆ ಇಳಿದು ತನಿಖೆ ನಡೆಸೋ ರೋವರ್​ ಇದೆ. ಇದರ ಹೆಸರು ಪ್ರಿಸರ್ವೆನ್ಸ್…ಇದು ಫೆಬ್ರವರಿ 18ಕ್ಕೆ ಮಂಗಳನ ಮೇಲೆ ಲ್ಯಾಂಡ್ ಆಗ್ಬೋದು. ಈ ಎಲ್ಲಾ ಮಿಷನ್​ಗಳು ಮಂಗಳನ ಮೇಲೆ ಯಾವತ್ತಾದ್ರೂ, ಯಾವ್ದಾದ್ರೂ ಥರದ ಜೀವಿಗಳು ಇದ್ದವಾ ಅಂತಾ ತನಿಖೆ ನಡೆಸುತ್ತವೆ. ಅಮೆರಿಕದ ಮಿಷನ್ ಹಿಂದೆ ಅಂತೂ ತುಂಬಾ ದೊಡ್ಡ ಪ್ಲಾನೇ ಇದೆ. ನಾಸಾ ಮತ್ತು ಯೂರೋಪಿಯನ್ ಸ್ಪೇಸ್ ಏಜೆನ್ಸಿ ಸೇರಿಕೊಂಡು 10 ವರ್ಷಗಳ ಒಂದು ಪ್ಲಾನ್ ಹಾಕೊಂಡಿದಾರೆ. ಹೇಗಾದ್ರೂ ಮಾಡಿ ಮಂಗಳನ ಮೇಲಿಂದ ಕಲ್ಲು – ಮಣ್ಣಿನ ಸ್ಯಾಂಪಲ್​​ಅನ್ನ ಕಲೆಕ್ಟ್ ಮಾಡಿ ಅದನ್ನ ವಾಪಾಸ್​ ಭೂಮಿಗೆ ತರಬೇಕು. ಅದನ್ನ ಇಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಿ ಜೀವಿಗಳು ಇದ್ದ ಗುರುತೇನಾದ್ರೂ ಸಿಗುತ್ತಾ ಅಂತಾ ಚೆಕ್ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದಾರೆ. ಅದರ ಮೊದಲ ಭಾಗವಾಗಿ ಈಗ ರೋವರ್​ ಕಳ್ಸಿದ್ದಾರೆ. ಅಂದಹಾಗೆ ನಿಮಗೆ ಗೊತ್ತಿರಲಿ ಮಂಗಳನ ಸಮೀಪ ಹೋಗಿ ಅಧ್ಯಯನ ಮಾಡೋದು ಅತ್ಯಂತ ಕಠಿಣ. ಇದುವರೆಗೂ 60 ಪರ್ಸೆಂಟ್​ನಷ್ಟು ಪ್ರಯತ್ನಗಳು ಫೇಲ್​ ಆಗಿವೆ. ಆದ್ರೆ ಭಾರತ 2014ರಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿತ್ತು.

-masthmagaa.com

Contact Us for Advertisement

Leave a Reply