ಜೋಳಿಗೆ ಹಿಡಿದು ಹೊರಟ ಪಾಕ್‌ ನಾಯಕರಿಗೆ ಬಂಪರ್‌! 1 ಬಿಲಿಯನ್‌ ಡಾಲರ್ ಸಾಲ ಕೊಡೋದಕ್ಕೆ ಒಪ್ಪಿದ ಯುಎಇ!

masthmagaa.com:

ಆರ್ಥಿಕ ಹಿಂಜರಿತದಿಂದ ದಿವಾಳಿ ಭೀತಿ ಎದುರಿಸ್ತಿರೋ ಪಾಕಿಸ್ತಾನಕ್ಕೆ ಗಲ್ಫ್ ದೇಶಗಳ ನೆರವಿನ ಹರಿವು ಮುಂದುವರೆದಿದೆ. ಸೌದಿ ಬಳಿಕ ಈಗ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕೂಡ ಪಾಕಿಸ್ತಾನಕ್ಕೆ ಸುಮಾರು 1 ಬಿಲಿಯನ್‌ ಅಂದ್ರೆ 8,200 ಕೋಟಿ ರೂಪಾಯಿ ಡಾಲರ್ ಸಾಲ ನೀಡೋಕೆ ಮುಂದಾಗಿದೆ. ಪಾಕಿಸ್ತಾನ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಹಾಗೂ ಪಾಕ್‌ ಸೇನಾ ಮುಖ್ಯಸ್ಥ ಮುಲ್ಲಾ ಜನರಲ್‌ ಅಂತಲೇ ಕರೆಯಲಾಗ್ತಿರೋ ಆಸೀಮ್‌ ಮುನೀರ್‌ ಯುಇಎಗೆ ಭೇಟಿ ಕೊಟ್ಟ ನಂತರ ಈ ಬೆಳವಣಿಗೆಯಾಗಿದೆ. ಈ ವಿಚಾರವನ್ನ ಪಾಕಿಸ್ತಾನದ ಮಾಹಿತಿ ಸಚಿವೆ ಮರಿಯಮ್‌ ಔರಂಗಜೇಬ್‌ ತಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಯುಇಎ 2 ಬಿಲಿಯನ್‌ ಡಾಲರ್‌ ಸಾಲದ ಜೊತೆಗೆ ಈಗ ಸಧ್ಯಕ್ಕೆ ಹೆಚ್ಚುವರಿಯಾಗಿ 1 ಬಿಲಿಯನ್‌ ಡಾಲರ್‌ ಕೊಡೋಕೆ ಯುಎಇ ಒಪ್ಪಿಕೊಂಡಿದೆ. ಪಾಕಿಸ್ತಾನ್ ಪ್ರಧಾನಿ ಶೆಹಬಾಜ್‌ ಷರೀಫ್‌ ಹಾಗೇ ಯುಎಇ ಅಧ್ಯಕ್ಷ ಶೇಕ್‌ ಮೊಹ್ಮದ್‌ ಬಿನ್‌ ಜಾಯೇದ್‌ ಮಾತುಕತೆ ಮಾಡಿದ್ರು. ನಮ್ಮ ಪ್ರಧಾನಿಯನ್ನ ಭವ್ಯವಾಗಿ ಸ್ವಾಗತಿಸಿದ್ದಲ್ಲದೇ ಪಾಕ್‌ ಹಾಗೂ ಯುಎಇ ನಡುವಿನ ಐತಿಹಾಸಿಕ ಸಂಬಂಧದ ಕುರಿತು ಯುಎಇ ಅಧ್ಯಕ್ಷರು ತುಂಬಾ ಹೊಗಳಿಸಿದ್ದಾರೆ ಅಂತ ಮರಿಯಮ್‌ ಔರಂಗಜೇಬ್‌ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಇತ್ತೀಚಿಗೆ ತಾನೇ ಪಾಕಿಸ್ತಾನದ ನಾಯಕರು ಖಾಲಿ ಜೋಳಿಗೆ ಹಿಡ್ಕೊಂಡು ವಿಶ್ವಪರ್ಯಟನೆ ಮಾಡ್ತಾ ಇದ್ದು ಈಗಾಗಲೇ ಎರಡೆರಡು ಬಾರಿ ಗಲ್ಫ್‌ ಕಡೆಗೂ ಹೋಗಿ ಬಂದಿದ್ದಾರೆ. ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಯುಇಎಗೂ ಹೋಗೋಕೂ ಮುಂಚೆ ಪಾಕ್‌ ಸೇನಾ ಮುಖ್ಯಸ್ಥ ಆಸೀಮ್‌ ಮುನೀರ್‌ ಯುಇಎ, ಸೌದಿ ಎಲ್ಲ ಕಡೆ ಒನ್ಸಲ ರೌಂಡ್ಸ್‌ ಹೊಡ್ಕೊಂಡು ಬಂದಿದ್ರು. ಆಸೀಮ್‌ ಮುನೀರ್‌ ಬೇಟಿ ವೇಳೆ ನಮ್ಮ ದೇಶದ ಪರಿಸ್ಥಿತಿ ಕುರಿತು ಮಾತುಕತೆ ನಡೆದಿದೆ ಅಂತ ಪಾಕ್‌ ಮಾಧ್ಯಮಗಳು ವರದಿ ಮಾಡಿದ್ವು. ಈಗ ಆ ಸೋ ಕಾಲ್ಡ್‌ ಮಾತುಕತೆನೋ ಏನೋ ಒಟ್ನಲ್ಲಿ ಪಾಕ್‌ಗೆ ಒಂದಷ್ಟು ಸಹಾಯ ಸಿಕ್ಕಿದೆ. ಇನ್ನೊಂದ್ಕಡೆ ಪಾಕ್‌ನ ಪ್ರಜಾಪ್ರಭುತ್ವದ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದ್ದು ಪಾಕ್‌ನ ರಾಜಕೀಯ ಹಾಗೂ ಆಡಳಿತದಲ್ಲಿ ಸೇನೆಯ ಪಾತ್ರ, ಪ್ರಭಾವ ಗಾಢವಾಗಿ ಬೇರೂರಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply