UFO ಕುರಿತ ಅಮೆರಿಕ ಗುಪ್ತಚರ ವರದಿ ಬಹಿರಂಗ! ಏನಿದೆ ಗೊತ್ತಾ?

masthmagaa.com:

ಅಮೆರಿಕ: ತುಂಬಾ ಟೈಮಿಂದ ಸದ್ದು ಮಾಡ್ತಿದ್ದ ಯುಎಫ್​​​ಒ ಅಂದ್ರೆ ಅನ್​​ಐಡೆಂಟಿಫೈಡ್​​ ಫ್ಲೈಯಿಂಗ್ ಆಬ್ಜೆಕ್ಟ್​​​​​​ಗಳ ಕುರಿತ ಅಮೆರಿಕ ಗುಪ್ತಚರ ವರದಿ ಬಹಿರಂಗವಾಗಿದೆ. 2004ರಿಂದ 2021ರವರಗೆ ಅಮೆರಿಕದಲ್ಲಿ ಸುಮಾರು 144 ಯುಎಫ್​​ಒ ಘಟನೆಗಳು ವರದಿಯಾಗಿದ್ವು. ಅಮೆರಿಕದ ಸೇನಾ ನೆಲೆಗಳ ಮೇಲೆ, ತರಬೇತಿ ಕೇಂದ್ರಗಳ ಮೇಲೆಲ್ಲಾ ಅಪರೂಪದ ಹಾರುವ ವಸ್ತುಗಳು ಪತ್ತೆಯಾಗಿದ್ವು. ಈ ಸಂಬಂಧ ಈಗ ಗುಪ್ತಚರ ಇಲಾಖೆಯ ಅನ್​​ಐಡೆಂಟಿಫೈಡ್​​ ಏರಿಯಲ್ ಫೆನೋಮೆನಾ ಹೆಸರಿನ 9 ಪುಟಗಳ ವರದಿಯನ್ನು ಬಹಿರಂಗಪಡಿಸಲಾಗಿದ್ದು, ಅದ್ರಲ್ಲಿ ಯುಎಫ್​​ಒಗಳು ಬಾಹ್ಯಾಕಾಶದಿಂದ ಬಂದಿದ್ದು ಅನ್ನೋದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಅಂತ ಹೇಳಲಾಗಿದೆ.

ಆದ್ರೆ ಇದ್ರಲ್ಲಿ ಸಾಕ್ಷ್ಯಗಳಿಲ್ಲ ಅಂತ ಹೇಳಲಾಗಿದೆಯೇ ಹೊರತು ಅವುಗಳು ಏಲಿಯನ್ಸ್​​ಗಳ ನೌಕೆ ಅಲ್ಲ ಅನ್ನೋದನ್ನ ಸ್ಪಷ್ಟವಾಗಿ ನಿರಾಕರಿಸಿಲ್ಲ. 144 ಯುಎಫ್​​ಒಗಳ ಪೈಕಿ 143ರ ಕುರಿತ ಮಾಹಿತಿ ಅಸ್ಪಷ್ಟವಾಗಿದ್ದು, ಒಂದನ್ನು ಬಲೂನ್ ಎಂದು ಗುರುತಿಸಲಾಗಿದೆ. ಇವುಗಳ ಪೈಕಿ 18 ಘಟನೆಗಳಲ್ಲಿ ಯುಎಫ್​ಒಗಳು ತೀವ್ರತೆಯ ಗಾಳಿಯಲ್ಲಿ ಸ್ಥಿರವಾಗಿ ಚಲಿಸಿರೋದು ಮತ್ತು ಯಾವುದೇ ಬಲಪ್ರಯೋಗವಿಲ್ಲದೇ ಇಲ್ಲದೇ ವೇಗವಾಗಿ ಸಾಗುತ್ತಿರೋದು ಕಂಡು ಜನ ಆಶ್ಚರ್ಯಚಕಿತರಾಗಿದ್ರು. ಹೀಗಾಗಿ ಈ ಘಟನೆಗಳನ್ನು ಕೂಡ ವಿವಿಧ ಆಯಾಮಗಳಲ್ಲಿ ಪರೀಕ್ಷಿಸಲಾಯ್ತು ಅಂತ ಕೂಡ ವರದಿಯಲ್ಲಿ ಹೇಳಲಾಗಿದೆ.

ಇನ್ನು 144 ಘಟನೆಗಳ ಪೈಕಿ ಹಲವು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಸ್ತುಗಳೂ ಆಗಿರಬಹುದು ಅಂತ ಅಂದಾಜು ಮಾಡಲಾಗಿದೆ. ಅಂದ್ರೆ ಹಕ್ಕಿಗಳೋ, ಡ್ರೋನ್​​ಗಳೋ ರಡಾರ್ ಸಂಪಕಕ್ಕೆ ಬಂದಿರಬಹುದು. ಅಥವಾ ವಾಯುಮಂಡಲದ ವಿದ್ಯಮಾನ ಅಂದ್ರೆ ಐಸ್​ ಕ್ರಿಸ್ಟಲ್​​​​ಗಳಿರಬಹುದು ಅಂತ ಹೇಳಿದೆ. ಈ ಘಟನೆಗಳ ಪೈಕಿ ಮತ್ತೊಂದಷ್ಟು ಅಮೆರಿಕದ ರಕ್ಷಣಾ ಇಲಾಖೆಯ ಪ್ರಯೋಗದ ಭಾಗವಾಗಿರಬಹುದು. ಅಥವಾ ರಷ್ಯಾ ಮತ್ತು ಚೀನಾದಿಂದ ತಯಾರಿಸಲ್ಪಟ್ಟ ಮುಂದುವರಿದ ತಂತ್ರಜ್ಞಾನವೂ ಇರಬಹುದು ಅಂತ ಕೂಡ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಇನ್ನು ಕೆಲವು ಘಟನೆಗಳಲ್ಲಿ ಕಂಡು ಬಂದ ಯುಎಫ್​ಒಗಳು ಏನು ಅಂತ ತಿಳಿಯೋಕೆ ಮತ್ತಷ್ಟು ಮುಂದುವರಿದ ತಂತ್ರಜ್ಞಾನ ಬೇಕು. ಒಂದೇ ಮಾತಲ್ಲಿ ಅವುಗಳು ಏನು ಅಂತ ಹೇಳೋಕೆ ಸಾಧ್ಯವಿಲ್ಲ ಎಂದಿರೋ ಗುಪ್ತಚರ ಸಂಸ್ಥೆ ಇವುಗಳನ್ನು ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳು ಅಂತ ಹೇಳಿದೆ.

ಅಂದಹಾಗೆ ಹೆಚ್ಚುತ್ತಿರುವ ಯುಎಫ್​ಒ ಘಟನೆಗಳ ಕುರಿತು ಸಮಗ್ರ ವರದಿ ನೀಡುವಂತೆ ಪೆಂಟಗಾನ್ ಒಂದು ಟಾಸ್ಕ್​ ಫೋರ್ಸ್​ ರಚಿಸಿತ್ತು. ಕಳೆದ ವರ್ಷ ಪೆಂಟಗಾನ್​ನಿಂದ ರಿಲೀಸ್ ಆಗಿದ್ದ ವಿಡಿಯೋವೊಂದು ಫುಲ್ ಸಂಚಲನ ಮೂಡಿಸಿತ್ತು. ನೌಕಾಪಡೆಯ ಯೋಧರು ಪ್ರಶಾಂತ ಮಹಾಸಾಗರದಲ್ಲಿ ಆ ವಿಡಿಯೋ ರೆಕಾರ್ಡ್ ಮಾಡಿದ್ರು. ಅದ್ರಲ್ಲಿ ಆಕಾಶದಲ್ಲಿ ವಿಚಿತ್ರವಾದ ವಸ್ತುಗಳು ತೇಲುತ್ತಿರೋದು ಪತ್ತೆಯಾಗಿತ್ತು. ಅವುಗಳು ನಮ್ಮನ್ನು ಫಾಲೋ ಮಾಡ್ತಿದ್ವು. ಆ ವಾಹನದಲ್ಲಿ ಯಾವುದೇ ಹೊಗೆ ಕೂಡ ಬರ್ತಾ ಇರಲಿಲ್ಲ. ಪದೇ ಪದೇ ತಮ್ಮ ಲೊಕೇಶನ್ ಚೇಂಜ್ ಮಾಡ್ತಿದ್ವು ಅಂತ ನಿವೃತ್ತ ನಾಕಾಪಡೆ ಯೋಧರು ಸಂದರ್ಶನದಲ್ಲಿ ಹೇಳಿಕೊಂಡಿದ್ರು.

-masthmagaa.com

Contact Us for Advertisement

Leave a Reply