ರುವಾಂಡ ಸೇಫ್‌ ಅಂದ ಬ್ರಿಟನ್‌ನಿಂದ ಅಲ್ಲಿನ ನಿರಾಶ್ರಿತರಿಗೆ ಆಶ್ರಯ!

masthmagaa.com:

ಬ್ರಿಟನ್‌ಗೆ ವಲಸಿಗರು ನುಗ್ಗೋ ವಿಚಾರ ಇದೇನೂ ಮೊದಲಲ್ಲಾ. ಈ ಕುರಿತು ಬ್ರಿಟನ್‌ ಸರ್ಕಾರ ಕೂಡ ಈ ಹಿಂದೆ ಕೆಲ ಕ್ರಮಗಳನ್ನ ತೆಗೆದುಕೊಂಡಿತ್ತು. ಬ್ರಿಟನ್‌ಗೆ ವಲಸೆ ಬರೋರನ್ನ ಸೇಫ್ಟಿಯಿಲ್ಲದ ಆಫ್ರಿಕಾದ ರುವಾಂಡ ದೇಶಕ್ಕೆ ಕಳಿಸೋದಾಗಿ ನಿರ್ಧಾರ ಮಾಡಿತ್ತು. ಅಷ್ಟೇ ಅಲ್ದೇ ಈ ರುವಾಂಡ ದೇಶವನ್ನ ಬಹಳ ಸೇಫ್‌, ನಿರಾಶ್ರಿತರು ಇರೋಕೆ ಸೋಕ್ತ ಜಾಗ ಅಂತ ಬೇರೆ ಹೇಳಿತ್ತು. ಇದೀಗ ಅದೇ ಬ್ರಿಟನ್‌ ಸರ್ಕಾರ 4 ರುವಾಂಡ ದೇಶದ ನಿರಾಶ್ರಿತರಿಗೆ ತನ್ನ ದೇಶದಲ್ಲಿ ʻನಿರಾಶ್ರಿತರ ಸ್ಟೇಟಸ್‌ʼ ನೀಡಿದೆ. ಹೌದು ಇತ್ತೀಚೆಗಷ್ಟೇ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವ್ರು, ಬ್ರಿಟನ್‌ಗೆ ಬರೋ ನಿರಾಶ್ರಿತರಿಗೆ ರುವಾಂಡ ದೇಶ ನಿಸ್ಸಂದೇಹವಾಗಿ ಬಹಳ ಸೇಫ್‌ ಆಗಿರೋ ಜಾಗ ಅಂತ ಹೇಳಿದ್ರು. ಅಷ್ಟೇ ಅಲ್ದೇ ಬ್ರಿಟನ್‌ ಪಾರ್ಲಿಮೆಂಟ್‌ನ ಮೇಲ್ಮನೆ ʻಹೌಸ್‌ ಆಫ್‌ ಲಾರ್ಡ್‌ʼನಲ್ಲೂ ಈ ಬಗ್ಗೆ ಇತ್ತೀಚೆಗೆ ಡಿಬೇಟ್‌ ನಡೆದಿತ್ತು. ಜೊತೆಗೆ ಹೊಸತಾಗಿ ʻರುವಾಂಡ ಬಿಲ್‌ʼನ್ನ ಕೂಡ ಪ್ರಸ್ತಾಪಿಸಲಾಗಿತ್ತು. ಇದ್ರ ಪ್ರಕಾರ, ಆಫ್ರಿಕಾದ ರುವಾಂಡದಲ್ಲಿ ಆಶ್ರಯ ಪಡೆಯೋರನ್ನ ಸಾಗಿಸೋಕೆ ಯಾವ್ದೇ ರೀತಿಯ ಕಾನೂನು ಸವಾಲುಗಳನ್ನ ಒಡ್ಡಬಾರ್ದು ಎನ್ನಲಾಗಿದೆ. ಈ ರೀತಿ ಬ್ರಿಟನ್‌ಗೆ ಬರೋ ನಿರಾಶ್ರಿತರಿಗೆ ರುವಾಂಡ ಸೇಫ್‌ ಪ್ಲೇಸ್‌ ಅಂತ ವಾದಿಸ್ತಿದ್ದ ಬ್ರಿಟನ್‌ ಸರ್ಕಾರ, 4 ತಿಂಗಳ ಹಿಂದೆ ರುವಾಂಡ ನಿರಾಶ್ರಿತರಿಗೆ ಆಶ್ರಯ ನೀಡಿತ್ತು. ಅಲ್ದೇ ರುವಾಂಡ ದೇಶದ ಆಡಳಿತದಡಿಯಲ್ಲಿ ಈ ನಿರಾಶ್ರಿತರಿಗೆ ತೊಂದರೆಯಾಗಿದೆ, ಇವ್ರು ರಿಸ್ಕ್‌ನಲ್ಲಿದ್ದಾರೆ ಅಂತ ಕಾರಣ ಬೇರೆ ಕೊಟ್ಟಿದ್ಯಂತೆ. ಹೀಗಂತ ಬ್ರಿಟನ್‌ನ ʻಅಬ್ಸರ್ವರ್‌ʼ ಪತ್ರಿಕೆ ಮತ್ತು ʻಲೆಡ್‌ ಬೈ ಡಾಂಕೀಸ್‌ʼ ಅನ್ನೋ ಕ್ಯಾಂಪೇನ್‌ ಗ್ರೂಪ್‌ ನಡೆಸಿದ ತನಿಖೆಯ ರಿಪೋರ್ಟ್‌ ನಲ್ಲಿ ರಿವೀಲ್‌ ಆಗಿದೆ.

-masthmagaa.com

Contact Us for Advertisement

Leave a Reply