ಸುನಕ್‌ ಸಂಬಂಧಿಕರಾಗಿರೋದ್ರಿಂದ ಬ್ರಿಟನ್‌ನಲ್ಲಿ ಇನ್ಪೋಸಿಸ್‌ ವಿಸ್ತರಣೆ!

masthmagaa.com:

ಬ್ರಿಟನ್‌ನಲ್ಲಿ ಇನ್ಪೋಸಿಸ್‌ ಕಂಪನಿ ವಿಸ್ತರಣೆಗೆ VIP ಅಕ್ಸೆಸ್ ನೀಡಲಾಗಿದೆ. ಪ್ರಧಾನಿ ರಿಷಿ ಸುನಾಕ್‌ ತಮ್ಮ ಮಾವನವರ ಕಂಪನಿಗೆ ಫೇವೊರ್‌ ಆಗೋ ತರ ಕೆಲಸ ಮಾಡಿದ್ದಾರೆ ಅಂತ, ವಿಪಕ್ಷ ಲೇಬರ್‌ ಪಾರ್ಟಿ ಆರೋಪಿಸಿದೆ. ಸುನಕ್‌ರ ಮಾವ ನಾರಾಯಣ ಮೂರ್ತಿಯವ್ರ ಮಾಲಿಕತ್ವದಲ್ಲಿ ಇನ್ಪೋಸಿಸ್‌ ಕಂಪನಿ ಇರೊದ್ರಿಂದ ಬ್ರಿಟನ್‌ನಲ್ಲಿ ಕಂಪನಿಯ ದಾರಿ ಸಲೀಸಾಗಿದೆ ಅಂತ ಆರೋಪಿಸಲಾಗಿದೆ. ಅಂದ್ಹಾಗೆ 2023ರ ಏಪ್ರಿಲ್‌ನಲ್ಲಿ ಯುಕೆ ವ್ಯಾಪರ ಸಚಿವ ಲಾರ್ಡ್‌ ಡೊಮಿನಿಕ್ ಜಾ‌ನ್ಸನ್ ಬೆಂಗಳೂರಿಗೆ ಭೇಟಿ ನೀಡಿದಾಗ, ಬ್ರಿಟನ್‌ನಲ್ಲಿ ಇನ್ಪೋಸಿಸ್‌ ಕಂಪನಿ ವಿಸ್ತರಣೆಗೆ ಗ್ರೀನ್‌ ಸಿಗ್ನಲ್‌ ನೀಡಿದ್ರು. ಈ ವಿಚಾರವನ್ನ ರಿಸೆಂಟಾಗಿ ಬ್ರಿಟನ್‌ನ ಸಂಡೇ ಮಿರರ್‌ ಪತ್ರಿಕೆ ರಿವೀಲ್‌ ಮಾಡಿತ್ತು. ಇದ್ರ ಬೆನ್ನಲ್ಲೇ ಲೇಬರ್‌ ಪಾರ್ಟಿ ಸುನಾಕ್‌ ವಿರುದ್ಧ ಆರೋಪ ಮಾಡಿದೆ. ಅಲ್ಲದೇ ಈಗಾಗ್ಲೆ ಸುನಾಕ್‌ ಮೇಲೆ ಸರ್ಕಾರದ ಹಣವನ್ನ personal protective equipment ಅಥ್ವಾ PPE ಮೇಲೆ ಹೂಡಿಕೆ ಮಾಡಿರೋ ಆರೋಪ ಕೇಳಿಬಂದಿದೆ. ಸುನಾಕ್‌ ಪತ್ನಿ ಅಕ್ಷತಾ ಮೂರ್ತಿ ಕೂಡ ಇನ್ಫೋಸಿಸ್‌ನಲ್ಲಿ ಷೇರು ಹೊಂದಿದ್ದಾರೆ. ಇನ್ನೊಂದೆಡೆ ಭಾರತೀಯ ಮೂಲದ ಇಬ್ಬರು ಪ್ರಧಾನಿಗಳು ಮೀಟ್‌ ಮಾಡಿರೋ ಸ್ವಾರಸ್ಯಕರ ಬೆಳವಣಿಗೆಯಾಗಿದೆ. ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ‍ಮತ್ತು ಐರ್ಲೆಂಡ್‌ ಪ್ರಧಾನಿ ಲಿಯೋ ವರಾದ್ಕರ್‌ ಐರ್ಲೆಂಡ್‌ನಲ್ಲಿ ಮೀಟ್‌ ಮಾಡಿದ್ದಾರೆ. ಈ ವೇಳೆ ಉಭಯ ನಾಯಕರು ಐರ್ಲೆಂಡ್‌ನ ನಾರ್ದರ್ನ್‌ ಪ್ರಾವಿನ್ಸ್‌ನ ಅಧಿಕಾರ ಹಂಚಿಕೆ ಒಪ್ಪಂದದ ಕುರಿತಂತೆ ಡಿಸ್‌ಕಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply