ಬಾಗಿಲು ತೆರೆಯದೇ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪೇಚಾಟ!

masthmagaa.com:

ನೆದರ್‌ಲ್ಯಾಂಡ್ಸ್‌ ಪ್ರಧಾನಿ ಮಾರ್ಕ್‌ ರುಟ್ಟೆ ಅವ್ರನ್ನ ವೆಲ್ಕಮ್‌ ಮಾಡೋ ವೇಳೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವ್ರ ಅಫಿಶಿಯಲ್‌ ನಿವಾಸದಲ್ಲಿ ಅದೇನೋ ಸ್ವಲ್ಪ ಕನ್ಫ್ಯುಶನ್‌ ಕಂಡುಬಂದಿದೆ. ರಿಷಿ ಸುನಕ್‌ರವ್ರ ಲಡನ್‌ನ 10 ಡೌನಿಂಗ್‌ ಸ್ಟ್ರೀಟ್‌ ನಿವಾಸದಲ್ಲಿ ಈ ಘಟನೆ ನಡೆದಿರೋದು ವರದಿಯಾಗಿದೆ. ಅಂದ್ಹಾಗೆ, ರಿಷಿ ಸುನಕ್‌ ಅವ್ರು ತಮ್ಮ ನಿವಾಸದ ಸ್ಟೆಪ್ಸ್‌ನಲ್ಲಿ ನಿಂತ್ಕೊಂಡು ನೆದರ್‌ಲ್ಯಾಂಡ್ಸ್‌ ಪ್ರಧಾನಿಯನ್ನ ಹ್ಯಾಂಡ್‌ಶೇಕ್‌ ಮಾಡಿ ಸ್ವಾಗತ ಮಾಡ್ತಿದ್ರು. ಮೀಡಿಯಾಳ ಮುಂದೆ ನಿಂತು ಫೋಟೋಗೆ ಪೋಸ್‌ ಕೊಟ್ಟ ನಂತರ ಹಿಂದಕ್ಕೆ ತಿರುಗಿ ನಿವಾಸದ ಒಳಗೆ ಹೋಗೋಕೆ ರೆಡಿಯಾದ್ರು. ಆದ್ರೆ ಈ ವೇಳೆ 10 ಡೌನಿಂಗ್‌ ಸ್ಟ್ರೀಟ್‌ನ ಬಾಗಿಲು ಓಪನ್‌ ಆಗ್ಲೇ ಇಲ್ಲ. ಸ್ವಲ್ಪ ಹೊತ್ತು ಕನ್ಫ್ಯುಸ್‌ ಆದ ಅವ್ರು ಅತ್ತ ಇತ್ತ ನೋಡಿದ್ದಾರೆ. ಬಳಿಕ ಸ್ವಲ್ಪ ಹೊತ್ತಲ್ಲೇ ನಿವಾಸದ ಬಾಗಿಲನ್ನ ಒಳಗಿಂದಲೇ ಯಾರೋ ತೆರೆದ್ರು. ರಿಷಿ ಸುನಕ್‌ ಮತ್ತು ನೆದರ್‌ಲ್ಯಾಂಡ್ಸ್‌ ಪ್ರಧಾನಿ ಉಸ್ಸಪ್ಪಾ ಬಾಗಿಲು ತೆರೀತಲ್ಲ ಅಂತ ಒಳಗೆ ಹೋದ್ರು. ಅಂದ್ಹಾಗೆ ಈ ವೇಳೆ ಉಭಯ ದೇಶಗಳು ರಷ್ಯಾ-ಯುಕ್ರೇನ್‌ ಯುದ್ಧದಲ್ಲಿ, ಯುಕ್ರೇನ್‌ಗೆ ಸಪೋರ್ಟ್‌ ಮಾಡೋ ಬಗ್ಗೆ ಚರ್ಚೆ ಮಾಡಿದ್ರು. ಜೊತೆಗೆ ಇಸ್ರೇಲ್‌-ಹಮಾಸ್‌ ಯುದ್ಧದ ಬಗ್ಗೆನೂ ಮಾತುಕತೆ ನಡೆಸಿದ್ರು ಅಂತ ಮಾರ್ಕ್‌ ರುಟ್ಟೆ ಅವ್ರು ತಮ್ಮ `X’ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply