ರಷ್ಯಾ ಯುಕ್ರೇನ್​ ಮೇಲೆ ದಾಳಿ ಮಾಡುತ್ತಾ? ಸರ್ವೇಯಲ್ಲಿ ಜನ ಹೇಳಿದ್ದೇನು?

masthmagaa.com:

ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳನ್ನ ಎದುರು ಹಾಕ್ಕೊಂಡು ರಷ್ಯಾ ಯುಕ್ರೇನ್​ ಮೇಲೆ ಆಕ್ರಮಣ ಮಾಡುತ್ತಾ ಇಲ್ವಾ ಅನ್ನೋ ಅನುಮಾನದ ನಡುವೆ, ಇದೇ ವರ್ಷ ರಷ್ಯಾ ಅಟ್ಯಾಕ್​ ಮಾಡ್ಬೋದು ಅಂತ ಬಹುತೇಕ ಯುರೋಪಿಯನ್ನರು ಹೇಳಿದ್ದಾರೆ. ಜೊತೆಗೆ ನ್ಯಾಟೋ ಮತ್ತು ಯುರೋಪಿಯನ್​ ಯೂನಿಯನ್​ ಎರಡೂ ಕೂಡ ಯುಕ್ರೇನ್​ ಬೆನ್ನಿಗೆ ನಿಲ್ಲಬೇಕು ಅಂತ ಆಗ್ರಹಿಸಿದ್ದಾರೆ. ಅಂದ್ಹಾಗೆ ಯುರೋಪಿನ ಏಳು ದೇಶಗಳ ಜನಾಭಿಪ್ರಾಯವನ್ನ ಪಡೆಯಲು European Council on Foreign Relations ಸರ್ವೆ ನಡೆಸಿತ್ತು. ಫ್ರಾನ್ಸ್, ಜರ್ಮನಿ, ಪೊಲ್ಯಾಂಡ್​, ಇಟಲಿ, ಸ್ವೀಡನ್​, ಫಿನ್​ಲ್ಯಾಂಡ್​ ಮತ್ತು ರೊಮೇನಿಯಾದಲ್ಲಿ ಸರ್ವೆ ನಡೆದಿತ್ತು. ಈ ಏಳು ದೇಶಗಳ ಜನಸಂಖ್ಯೆಯು ಯುರೋಪಿಯನ್​ ಯೂನಿಯನ್​​ ಜನಸಂಖ್ಯೆಯ ಮೂರನೇ ಎರಡರಷ್ಟಿದೆ ಅನ್ನೋದು ಕೂಡ ಗಮನಾರ್ಹ.

-masthmagaa.com

Contact Us for Advertisement

Leave a Reply