ಯುಕ್ರೇನ್‌ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ಏರ್‌ಸ್ಟ್ರೈಕ್!

masthmagaa.com:

ರಷ್ಯಾ ಉಕ್ರೇನ್‌ ಸಂಘರ್ಷದಲ್ಲಿ ಮಾರಿಯೋಪೊಲ್‌ನಲ್ಲಿರುವ ಹೆರಿಗೆ ಹಾಸ್ಪಿಟಲ್‌ ಮೇಲೆ ರಷ್ಯಾ ಏರ್​ಸ್ಟ್ರೈಕ್ ನಡೆಸಿದ್ದು ಒಂದು ಮಗು ಸೇರಿದಂತೆ ಮೂವರು ಪ್ರಾಣ ಬಿಟ್ಟಿದ್ದಾರೆ. 17 ಜನ ಗಾಯಗೊಂಡಿದ್ದಾರೆ ಅಂತ ಉಕ್ರೇನ್‌ ಆರೋಪ ಮಾಡಿದೆ. ಅಲ್ದೇ ಕೆಲವೊಂದಷ್ಟು ಜನ ಆಸ್ಪತ್ರೆಯ ಬೇಸ್ಮೆಂಟ್‌ ಬಳಿ ಇದ್ದಿದ್ದರಿಂದ ಅಂತವರು ಈ ಘಟನೆಯಿಂದ ಪಾರಾಗಿದ್ದಾರೆ ಅಂತ ಉಕ್ರೇನ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ, ಇದು ಯುದ್ಧ ಅಪರಾಧ ಅಂತ ರಷ್ಯಾ ವಿರುದ್ದ ಕೆಂಡವಾಗಿದ್ದಾರೆ. ಅಲ್ದೇ ರಷ್ಯಾ ಸೈನಿಕರು ಮಕ್ಕಳ ಆಸ್ಪತ್ರೆಯ ಮೇಲೂ ದಾಳಿ ಮಾಡಿರೋದು ಸಹಿಸೋಕಾಗಲ್ಲ. ಇದನ್ನೆಲ್ಲಾ ನೋಡ್ತಿದ್ರೆ ರಷ್ಯಾ ಯಾವ್‌ ರೀತಿ ದೇಶ ಅನ್ನೋದೇ ಗೊತ್ತಾಗ್ತಿಲ್ಲ… ಅವ್ರು ಮನುಷ್ಯರೇ ಅಲ್ಲ ಅಂತ ರಷ್ಯಾಗೆ ಚಾಟಿ ಬೀಸಿದ್ದಾರೆ. ಇತ್ತ ಘಟನೆ ಬಗ್ಗೆ ಅಮೆರಿಕ ವೈಟ್​​​​ಹೌಸ್​​​ನ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ಮಾತನಾಡಿ, “ರಷ್ಯಾ ಸೈನಿಕರು ಮುಗ್ದ ಜನರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಅವರು ಮಾಡಿರೋದು ಅನಾಗರೀಕ ಹಾಗು ಅತಿಕ್ರೂರ ಕೆಲಸ” ಅಂತ ರಷ್ಯಾ ವಿರುದ್ಧ ಕಿಡಿಕಾರಿದ್ದಾರೆ. ಇನ್ನುಈ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾರಿಯಾ ಝಖರೋವಾ, ಇದು ಉಕ್ರೇನ್‌ ಸೈನಿಕರ ಕುತಂತ್ರ ಅಂತ ತಮ್ಮ ಮೇಲಿದ್ದ ಆರೋಪವನ್ನ ನಿರಾಕರಿಸಿದ್ದಾರೆ. ಇನ್ನು ವಿಶ್ವಸಂಸ್ಥೆಯಲ್ಲಿರುವ ರಷ್ಯಾದ ಖಾಯಂ ಉಪ ಪ್ರತಿನಿಧಿ ಡಿಮಿಟ್ರಿ ಪೊಲೆನ್ಸ್ಕಿ” ಒಂದು ಸುಳ್ಳು ಸುದ್ದಿ ಹೇಗ್‌ ಹುಟ್ಟುತ್ತೆ ಅನ್ನೋಕೆ ಇದೇ ಸಾಕ್ಷಿ.. ಉಕ್ರೇನ್‌ನ ಈ ಆರೋಪವೆಲ್ಲಾ ಬರೀ ಬುರುಡೆ…ಯಾಕಂದ್ರೆ ದಾಳಿ ನಡೆದಿರೋ ಕಟ್ಟಡ ಹಳೇ ಹೆರಿಗೆ ಆಸ್ಪತ್ರೆಯಾಗಿದ್ದುಅದ್ರಲ್ಲಿ ಯಾರೂ ಇರ್ಲೇ ಇಲ್ಲ. ಆ ಕಟ್ಟಡ ಸೇನೆ ಕಂಟ್ರೋಲ್​​ನಲ್ಲಿದೆ…ಯಾರಿಗೂ ಯಾವುದೇ ತೊಂದ್ರೆ ಆಗಿಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply