ಸರ್ಜೀ ಲವ್​ರೋವ್​, ಡಿಮಿಟ್ರಿ ಕುಲೇಬ ಮೀಟಿಂಗ್!

masthmagaa.com:

ರಷ್ಯಾ ವಿದೇಶಾಂಗ ಸಚಿವ ಸರ್ಜೀ ಲವ್​ರೋವ್ ಮತ್ತು ಯುಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರಿ ಕುಲೇಬಾ ಮುಂದಿನ ಎರಡು ವಾರಗಳಲ್ಲಿ ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಉಭಯದೇಶಗಳ ಶಾಂತಿ ಮಾತುಕತೆಗೆ ವೇದಿಕೆಯಾಗಿದ್ದ ಟರ್ಕಿಯ ವಿದೇಶಾಂಗ ಸಚಿವ ಮೆವ್ಲುಟ್​ ಕವಶೊಗ್ಲು ಮಾಹಿತಿ ನೀಡಿದ್ದಾರೆ. ಅಂದಹಾಗೆ ರಷ್ಯಾ ಮತ್ತು ಯುಕ್ರೇನ್ ಕಡೆಯಿಂದ ಈವರೆಗೆ ಯಾವುದೇ ರೀತಿಯ ಸ್ಪಷ್ಟನೆ ಅಥವಾ ಈ ಕುರಿತ ಮಾಹಿತಿ ಲಭ್ಯವಾಗಿಲ್ಲ. ಟರ್ಕಿಯಲ್ಲಿ ಮಂಗಳವಾರ ಉಭಯದೇಶಗಳ ನಾಯಕರು ಭೇಟಿಯಾಗಿ ಚರ್ಚಿಸಿದ್ರು. ಶಾಂತಿ ಮಾತುಕತೆ ಒಂದು ಹಂತಕ್ಕೆ ಸಕ್ಸಸ್ ಆಗಿದೆ ಅಂತ ಹೇಳಲಾಗಿದ್ರೂ ಕೂಡ ದಾಳಿ ಮಾತ್ರ ಇನ್ನೂ ನಿಂತಿಲ್ಲ. ಅಂದಹಾಗೆ ನ್ಯಾಟೋ ಸದಸ್ಯ ದೇಶವಾಗಿರೋ ಟರ್ಕಿ ರಷ್ಯಾ ಮತ್ತು ಯುಕ್ರೇನ್ ಎರಡೂ ದೇಶಗಳ ಜೊತೆ ಒಳ್ಳೆ ಫ್ರೆಂಡ್ಶಿಪ್ ಹೊಂದಿದ್ದು, ಸಂಧಾನಕ್ಕೆ ವೇದಿಕೆಯಾಗಲು ರೆಡಿಯಾಗಿದೆ.

-masthmagaa.com

Contact Us for Advertisement

Leave a Reply