ಈಗ! ರೈಲಿನ ಮೇಲಿಂದ ಕ್ಷಿಪಣಿ ಹಾರಿಸಿದ ಕಿಮ್ ಜಾಂಗ್ ಉನ್!

masthmagaa.com:

ಕಿಮ್ ಜಾಂಗ್ ಉನ್ ಈಗ ಎಲ್ಲಾ ಬಿಟ್ಟು ರೈಲಿನ ಮೇಲಿಂದ ಕ್ಷಿಪಣಿ ಹಾರಿಸಿದ್ದಾರೆ. ಉತ್ತರ ಕೊರಿಯಾದ ರೇಲ್ವೇ ಕ್ಷಿಪಣಿ ದಳ ಈ ಪ್ರಯೋಗ ನಡೆಸಿದೆ. ನಮ್ಮ ದೇಶವನ್ನ ಹೆದರಿಸೋಕೆ ಬರೋ ಯಾವುದೇ ಶತ್ರುವಿಗೆ ಇದು ಉತ್ತರ ಅಂತ ಸರ್ಕಾರಿ ನ್ಯೂಸ್ ಏಜೆನ್ಸಿ ಕೆಸಿಎನ್ಎ ವರದಿ ಮಾಡಿದೆ. ದಕ್ಷಿಣ ಕೊರಿಯಾದವ್ರು ಅತ್ಯಾಧುನಿಕ ಸಬ್ಮರೀನ್ ಮೂಲಕ ಕ್ಷಿಪಣಿ ಹಾರಿಸಿ ಪ್ರಯೋಗ ಮಾಡಿದ ದಿನವೇ ಕಿಮ್ಮಣ್ಣನ ಉತ್ತರ ಕೊರಿಯಾ ಈ ಕೆಲಸ ಮಾಡಿದೆ. ನೀವು ಜಲಂತರ್ಗಾಮಿಯಲ್ಲಿ ಹಾರಿಸಿದ್ರೆ ನಾವು ರೈಲಿನ ಮೇಲೆ ಹಾರಿಸ್ತೀವಿ ಅನ್ನೋ ರೀತಿ ವರ್ತಿಸಿದೆ ಉತ್ತರ ಕೊರಿಯಾ.
ಈ ಸಂಬಂಧ ಕೂಡಲೇ ಸಭೆ ನಡೆಸಿದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ, ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಯನ್ನ ಖಂಡಿಸಿದೆ. ಇದು ಇಡೀ ವಿಶ್ವಕ್ಕೇ ಆತಂಕಕಾರಿ ಅಂದಿದೆ.

-masthmagaa.com

 

Contact Us for Advertisement

Leave a Reply