AI ರೇಸ್‌ಗೆ ಭಾರತ ಎಂಟ್ರಿ! 10 ಸಾವಿರ ಕೋಟಿ ಘೋಷಿಸಿದ ಕೇಂದ್ರ!

masthmagaa.com:

2010ರ ದಶಕದಲ್ಲಿ ಜಗತ್ತನ್ನ ಸ್ಮಾರ್ಟ್‌ಫೋನ್‌ ಆವರಿಸಿಕೊಂಡಂತೆ ಈಗ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಎಲ್ಲೆಡೆ ಸದ್ದು ಮಾಡ್ತಿದೆ. ಇದೀಗ ಈ AI ಓಟಕ್ಕೆ ಭಾರತದಲ್ಲಿ ಪುಷ್ಠಿ ನೀಡಲು ಸರ್ಕಾರ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ, ಇಂಡಿಯಾ ಎಐ ಮಿಷನ್‌ಗೆ ಅನುಮೋದನೆ ನೀಡಿದ್ದು, ಇದಕ್ಕಾಗಿ ಮುಂದಿನ ಐದು ವರ್ಷಕ್ಕೆ 10,371.92 ಕೋಟಿ ರೂ. ಮೀಸಲಿಟ್ಟಿದೆ. ಈ ನಿಧಿ ಮೂಲಕ ದೇಶದಲ್ಲಿ ಕೃತಕ ಬುದ್ಧಿಮತ್ತೆ ಕಂಪ್ಯೂಟಿಂಗ್ ಸಾಮರ್ಥ್ಯ ಸ್ಥಾಪಿಸ ಬಯಸುವ ಖಾಸಗಿ ಕಂಪನಿಗಳಿಗೆ ಸಬ್ಸಿಡಿ ನೀಡಲಾಗುತ್ತೆ. ಅಲ್ಲದೆ, AI ಸ್ಟಾರ್ಟ್‌ಅಪ್‌ಗಳಿಗೆ ಕೂಡ ಸೀಡ್‌ ಮನಿಯನ್ನು ಒದಗಿಸಲಾಗುತ್ತೆ. AI ಬಳಕೆಗಾಗಿ ಬೆಸ್ಪೋಕ್ ಚಿಪ್‌ಗಳನ್ನ ವಿನ್ಯಾಸ ಮಾಡುವ ಸ್ಟಾರ್ಟ್‌ಅಪ್‌ಗಳಿಗೆ ಧನಸಹಾಯ ನೀಡುವುದು, AI ಬಳಕೆಗಾಗಿ ಭಾರತದಲ್ಲಿ ಡೇಟಾ ಕೇಂದ್ರಗಳನ್ನ ಸ್ಥಾಪಿಸ ಬಯಸುವ ಖಾಸಗಿ ಕಂಪನಿಗಳಿಗೆ ಗ್ಯಾಪ್ ಫಂಡಿಂಗ್ (VGF) ಒದಗಿಸುವುದು ಮತ್ತು ಕಂಪ್ಯೂಟಿಂಗ್ ಸಾಮರ್ಥ್ಯ ಸೃಷ್ಟಿಸುವುದು ಮಿಷನ್‌ನ ಮುಖ್ಯ ಉದ್ದೇಶವಾಗಿದೆ. ಅಂದ್ಹಾಗೆ ಇತ್ತೀಚೆಗೆ, ಸಾರ್ವಜನಿಕವಾಗಿ AI ಮಾಡೆಲ್‌ಗಳನ್ನ ಬಳಸಲು ಅನುಮತಿ ಪಡೆಯುವುದು ಕಡ್ಡಾಯ ಅಂತ ಸರ್ಕಾರ ಹೇಳಿತ್ತು. ಆದರೆ, ಬಳಿಕ ಇದು ದೊಡ್ಡ ಕಂಪನಿಗಳಿಗೆ ಮಾತ್ರ ಅನ್ವಯಿಸುತ್ತದೆ. ಸಣ್ಣ ಕಂಪನಿಗಳಿಗೆ ಸ್ಟಾರ್ಟ್‌ಅಪ್‌ಗಳಿಗೆ ಅಲ್ಲ ಅಂತ ಸ್ಪಷ್ಟೀಕರಣ ನೀಡಿತ್ತು.

-masthmagaa.com

Contact Us for Advertisement

Leave a Reply