ಹೊಟ್ಟೆನೋವು ಅಂತ ಶೌಚಲಯಕ್ಕೆ ಹೋದ ಯುವತಿ: ಮಗು ಜನನ..!

masthmagaa.com:

ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೊಟ್ಟೆ ನೋವಂತ ಶೌಚಾಲಯಕ್ಕೆ ಹೋಗಿದ್ದಾಗ ಮಗುವಿಗೆ ಜನ್ಮ ನೀಡಿದ ವಿಚಿತ್ರ ಘಟನೆಯೊಂದು ಯುನೈಟೆಡ್‌ ಕಿಂಗ್‌ಡೆಮ್‌ನಲ್ಲಿ ನಡೆದಿದೆ. 20 ವರ್ಷದ ಜೆಸ್‌ ಡೇವಿಸ್‌ ಮಗುವಿಗೆ ಜನ್ಮ ನೀಡಿದ ಯುವತಿ. ಗರ್ಭಧಾರಣೆ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೊಂದಿರಬೇಕಾದ ಯಾವುದೇ ಲಕ್ಷಣಗಳನ್ನ ಡೇವಿಸ್‌ ಹೊಂದಿರಲಿಲ್ಲ. ಮುಟ್ಟಿನ ಕಾರಣದಿಂದ ತನಗೆ ಹೊಟ್ಟೆನೋವು ಬಂದಿರಬಹುದು ಅಂತ ಯುವತಿ ಅನ್ಕೊಂಡಿದ್ದಾಳೆ. ಅಲ್ದೇ ಗರ್ಭಣಿಯರಿಗೆ ಫೀಲ್‌ ಆಗೋ ಬೇಬಿ ಬಂಪ್‌ ಅನುಭವ ಕೂಡ ಡೇವಿಸ್‌ಗೆ ಆಗಿರಲಿಲ್ಲ ಅಂತ ಹೇಳಲಾಗಿದೆ. ಸೌತಾಂಪ್ಟನ್‌ ವಿವಿಯಲ್ಲಿ ಓದುತ್ತಿದ್ದ ಡೇವಿಸ್‌, ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿ ಶಾಕ್‌ ಆಗಿದ್ದಾಳೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಯುವತಿ ನನಗೆ ಸರಿಯಾದ ಟೈಮ್‌ಗೆ ಮುಟ್ಟು ಆಗ್ತಿರಲಿಲ್ಲ. ಆದ್ದರಿಂದ ಇದರ ಬಗ್ಗೆ ಅಷ್ಟು ಗಮನಹರಿಸಿರಲಿಲ್ಲ. ಕೆಲವೊಮ್ಮೆ ವಾಮಿಟ್‌ ಅನುಭವ ಆಗ್ತಿತ್ತು. ಇದಕ್ಕೆ ಮೆಡಿಸಿನ್‌ ತೆಗ್ದುಕೊಳ್ಳುತ್ತಿದ್ದೆ. ಆದ್ರೆ ಮಗು ಜನಿಸಿದ್ದು ನನಗೆ ದೊಡ್ಡ ಶಾಕ್‌ ಆಗಿದೆ. ಒಂದ್‌ ರೀತಿ ಕನಸು ಅನಿಸಿತ್ತು ಅಂತ ಹೇಳಿದ್ದಾರೆ. 35 ವಾರಗಳಲ್ಲಿ ಜನಿಸಿದ ಈ ಮಗು 3 ಕೆಜಿ ಇದ್ದು, ತಾಯಿ ಮಗುವನ್ನ ಅಲ್ಲಿನ ಪ್ರಿನ್ಸಸ್‌ ಆನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಅಂತ ಡಾಕ್ಟರ್‌ ಹೇಳಿದ್ದಾರೆ.ಗಳಲ್ಲಿ

-masth

Contact Us for Advertisement

Leave a Reply