UPಯಲ್ಲಿ 4,000 ಮದ್ರಸಾಗಳ ವಿರುದ್ಧ ತನಿಖೆಗೆ ಆದೇಶಿಸಿದ ಯೋಗಿ! ಕಾರಣವೇನು?

masthmagaa.com:

ಉತ್ತರ ಪ್ರದೇಶದಲ್ಲಿ ಮದ್ರಸಾಗಳು ತಮಗೆ ದೇಶ-ವಿದೇಶಗಳಿಂದ ಬರೋ ದೇಣಿಗೆಯನ್ನ ದುರುಪಯೋಗ ಪಡಿಸಿಕೊಳ್ತಿವೆ ಅನ್ನೋ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ಮದ್ರಸಾಗಳು ತನಿಖೆ ಫೇಸ್‌ ಮಾಡಲಿವೆ ಅಂತ ತಿಳಿದುಬಂದಿದೆ. ಉತ್ತರ ಪ್ರದೇಶದಲ್ಲಿರೋ 24 ಸಾವಿರ ಮದ್ರಸಾಗಳಲ್ಲಿ 8 ಸಾವಿರ ಮದ್ರಸಾಗಳು ಅನಧಿಕೃತವಾಗಿವೆ. ಅವುಗಳಲ್ಲಿ 4 ಸಾವಿರ ಮದ್ರಸಾಗಳು, ಅದರಲ್ಲೂ ನೆರೆಯ ನೇಪಾಳದ ಗಡಿಯಲ್ಲಿ ಬರುವ ಕೆಲವು ಮದ್ರಸಾಗಳು ವಿವಿಧ ಮೂಲಗಳಿಂದ ಬರುವ ದೇಣಿಗೆಯನ್ನ ದೇಶದ್ರೋಹಿ ಚಟುವಟಿಕೆಗಳಿಗಾಗಿ ದುರುಪಯೋಗ ಪಡಿಸಿಕೊಳ್ತಿವೆ ಎನ್ನಲಾಗಿದೆ. ಹೀಗಾಗಿ ಇವುಗಳ ತನಿಕೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಸೂಚನೆ ಕೋಟ್ಟಿದ್ದಾರೆ. ಈ ಕಾರಣಕ್ಕೆ ಬಯೋತ್ಪಾದಕ ನಿಗ್ರಹ ದಳ(ATS)ದ ADGP ಮೋಹಿತ್‌ ಅಗರ್ವಾಲ್‌ ನೇತೃತ್ವದಲ್ಲಿ ಸ್ಪೆಷಲ್‌ ಇನ್‌ವೆಸ್ಟಿಗೇಶನ್‌ ಟೀಮ್(‌SIT) ಒಂದನ್ನ ನೇಮಿಸಿರೋದಾಗಿ ಅಧಿಕಾರಿಯೊಬ್ರು ಹೇಳಿದ್ದಾರೆ. ಈ ಮದ್ರಾಸಗಳಿಗೆ ಹಣ ಸಂದಾಯ ಮಾಡ್ತಿರೋ ಮೂಲಗಳು, ನಂತರ ಆ ಹಣದ ಖರ್ಚುಗಳ ಬಗ್ಗೆ ತನಿಖೆ ಮಾಡಲಾಗುವುದು. ಸದ್ಯದಲ್ಲೇ ಸಂಬಂಧಿಸಿದ ಮದ್ರಸಾಗಳು ಈ ವಿಚಾರವಾಗಿ ನೋಟೀಸ್‌ ನೀಡಲಾಗುವುದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply