ಯುಪಿ ವಾರ್ಷಿಕ ಬಜೆಟ್‌ ಮಂಡನೆ! ಅಯೋಧ್ಯೆ ಅಭಿವೃದ್ಧಿಗೆ 100 ಕೋಟಿ!

masthmagaa.com:

ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್‌ ಖನ್ನಾ ಫೆಬ್ರುವರಿ 05 ರಂದು ರಾಜ್ಯದ ವಾರ್ಷಿಕ ಬಜೆಟ್‌ ಮಂಡನೆ ಮಾಡಿದ್ದಾರೆ. ಒಟ್ಟು 7.36 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಜೆಟ್‌ ಮಂಡಿಸಲಾಗಿದೆ. ಇದ್ರಲ್ಲಿ ಅಯೋಧ್ಯೆ ಶ್ರೀರಾಮಂದಿರಕ್ಕೆ ಹೆಚ್ಚಿನ ಫೋಕಸ್‌ ನೀಡಲಾಗಿದೆ. ಅಯೋಧ್ಯೆಯ ಅಭಿವೃದ್ಧಿಗೆ ಸುಮಾರು 100 ಕೋಟಿ ರೂಪಾಯಿ, ಅಲ್ಲಿನ ಮಹರ್ಷಿ ವಾಲ್ಮೀಕಿ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ವಿಸ್ತರಣೆಗೆ 150 ಕೋಟಿ ರೂಪಾಯಿ ಮೀಸಲಿಡಲಾಗಿದೆ. 2,057 ಕೋಟಿ ರೂಪಾಯಿಯನ್ನ ಗಂಗಾ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಯೋಜನೆಗೆ ಹಂಚಲಾಗಿದೆ. ಇನ್ನು ಜೆವಾರ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ನಿರ್ಮಾಣ ಕಾರ್ಯಕ್ಕೆ 1,150 ಕೋಟಿ ರೂ. ಹೀಗೆ ಹೊಸ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗಿದೆ. ಈ ಮೂಲಕ ಯುಪಿಯಲ್ಲಿ ಪ್ರವಾಸೋದ್ಯಮವನ್ನ ಇನ್ನಷ್ಟು ಸ್ಟ್ರಾಂಗ್‌ ಮಾಡೋಕೆ ಯೋಗಿ ಸರ್ಕಾರ ಮುಂದಾಗಿದೆ.

-masthmagaa.com

Contact Us for Advertisement

Leave a Reply