ದುಷ್ಕರ್ಮಿಗಳಿಂದ ಚಾಕು ಇರಿತ: 4 ಜನ ಸಾವು, ಐವರಿಗೆ ಗಾಯ!

masthmagaa.com:

ದುಷ್ಕರ್ಮಿಗಳ ಚಾಕು ಇರಿತಕ್ಕೊಳಗಾಗಿ ನಾಲ್ವರು ಮೃತಪಟ್ಟಿರೊ ಘಟನೆ ಅಮೆರಿಕದಲ್ಲಿ ನಡೆದಿದೆ. ಅಲ್ಲಿನ ಎಲಿನಾಯ್ಸ್‌ ಪ್ರಾಂತ್ಯದ ಉತ್ತರ ಭಾಗದಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಐದು ಜನ ಗಾಯಗೊಂಡಿದ್ದಾರೆ ಅಂತ ಮಾಹಿತಿ ಲಭ್ಯ ಆಗಿದೆ. ಈ ಬಗ್ಗೆ ತನಿಖೆ ನಡೆಸ್ತಿರೊ ಪೋಲಿಸರು, ಶಂಕಿತನೊಬ್ಬನನ್ನ ವಶಕ್ಕೆ ಪಡೆದು ಸದ್ಯ ವಿಚಾರಣೆ ನಡೆಸ್ತಿದ್ದಾರೆ. ಅಂದ್ಹಾಗೆ ಇತ್ತೀಚಿಗಷ್ಟೇ ಇದೇ ಪ್ರದೇಶದಲ್ಲಿ ಉದ್ಯೋಗಿಯೊಬ್ರನ್ನ ಅಂಗಡಿಯೊಳಗೆ ನುಗ್ಗಿ ಚಾಕು ಇರಿದು ಫಿನಿಶ್‌ ಮಾಡಲಾಗಿತ್ತು. ಅದ್ರ ಬೆನ್ನಲ್ಲೆ ಈ ಘಟನೆ ನಡೆದಿದೆ.

-masthmagaa.com

Contact Us for Advertisement

Leave a Reply