ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ: ವಿಶ್ವಸಂಸ್ಥೆ ಸಭೆ ಕರೆದ ಅಮೆರಿಕ!

masthmagaa.com:

ಒಂದ್ಕಡೆ ಕಿಮ್ ಜಾಂಗ್ ಉನ್ ದೇಶ ಕ್ಷಿಪಣಿ ಪರೀಕ್ಷೆ ನಡೆಸಿ ವಿಕ್ಟರಿ ಅಂತ ಹೇಳ್ಕೊಂಡು ಓಡಾಡ್ತಿದ್ರೆ ಮತ್ತೊಂದ್ಕಡೆ ಅಮೆರಿಕ ಒಂದಾದ್ಮೇಲೆ ಒಂದು ನಿರ್ಬಂಧ ಹೇರಿ ಉತ್ತರ ಕೊರಿಯಾ ನಡು ಮುರಿಯಲು ಯತ್ನಿಸ್ತಿದೆ. ಇತ್ತೀಚೆಗಷ್ಟೇ ಉತ್ತರ ಕೊರಿಯಾ 2017ರ ಬಳಿಕ ಇದೇ ಮೊದಲ ಬಾರಿಗೆ ಅತಿ ಶಕ್ತಿಶಾಲಿ ಕ್ಷಿಪಣಿ ವಾಸಾಂಗ್ 12 ಪರೀಕ್ಷೆ ನಡೆಸಿತ್ತು. ಇದ್ರ ಬೆನ್ನಲ್ಲೇ ಅಮೆರಿಕ ವಿಶ್ವಸಂಸ್ಥೆಯಲ್ಲಿ ತುರ್ತು ಸಭೆ ಕರೆದಿದೆ. ಈ ಸಭೆ ಮುಚ್ಚಿದ ಕೋಣೆಯಲ್ಲಿ ನಡೆಯೋ ಸಾಧ್ಯತೆ ಇದೆ. ನಿನ್ನೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟೇರಸ್​​​​, ಉತ್ತರ ಕೊರಿಯಾದ ಈ ಕ್ಷಿಪಣಿ ಪರೀಕ್ಷೆ ಭದ್ರತಾ ಮಂಡಳಿ ನಿರ್ಣಯಗಳ ಸ್ಪಷ್ಟ ಉಲ್ಲಂಘನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply