ಚೀನಾದ ವಸ್ತುಗಳ ಆಮದಿನ ಮೇಲೆ ಅಮೆರಿಕ ಬ್ಯಾನ್!

masthmagaa.com:

ಉಘರ್ ಮುಸ್ಲಿಮರ ವಿರುದ್ಧ ಶಿಂಜಿಯಾಂಗ್​ನಲ್ಲಿ ನಡೀತಿರೋ ಹಿಂಸಾಚಾರಕ್ಕೆ ವಿರೊಧ ಜಾಸ್ತಿಯಾಗ್ತಾನೇ ಇದೆ. ಇದ್ರ ನಡುವೆಯೇ ಈಗ ಅಮೆರಿಕ ಶಿಂಜಿಯಾಂಗ್ ಪ್ರಾಂತ್ಯದಿಂದ ಯಾವುದೇ ಉತ್ಪನ್ನವನ್ನು ಆಮದು ಮಾಡಿಕೊಳ್ಳದಂತೆ ನಿರ್ಬಂಧ ವಿಧಿಸಿದೆ. ಚೀನಾಗೆ ಬುದ್ಧಿ ಕಲಿಸೋಕೆ ಈ ರೀತಿ ಮಾಡಿದೀವಿ ಅಂತ ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. Uyghur Forced Labor Prevention Act ಮೂಲಕ ಶಿಂಜಿಯಾಂಗ್​ನಲ್ಲಿ ಕಾರ್ಮಿಕರ ಕೈಯಲ್ಲಿ ಬಲವಂತವಾಗಿ ಉತ್ಪಾದಿಸಲಾದ ವಸ್ತುಗಳನ್ನು ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಈಗಾಗಲೇ ಕಾನೂನು ಇದ್ದು, ಬಲವಂತವಾಗಿ ಉತ್ಪಾದಿಸಲಾಗಿದೆ ಅಂತ ಗೊತ್ತಾದ್ರೆ, ಅದಕ್ಕೆ ತಕ್ಕ ಸಾಕ್ಷ್ಯಗಳಿದ್ರೆ ಅಂತಹ ವಸ್ತುಗಳ ಮೇಲೆ ನಿರ್ಬಂಧ ವಿಧಿಸೋಕೆ ಈಗಲೂ ಅವಕಾಶವಿದೆ. ಈಗಾಗಲೇ ಸೆನೆಟ್​​ನಲ್ಲಿ ಇದು ಪಾಸ್ ಆಗಿದ್ದು, ಹೌಸ್ ಆಫ್ ರೆಪ್ರೆಸೆಂಟೇಟಿವ್​​​ನಲ್ಲೂ ಪಾಸ್ ಆಗಬೇಕು. ನಂತರ ವೈಟ್​ಹೌಸ್​​ಗೆ ಹೋಗಿ ಅಧ್ಯಕ್ಷ ಜೋ ಬೈಡೆನ್ ಸಹಿಯೊಂದಿಗೆ ಕಾನೂನಿನ ರೂಪ ಪಡೆದುಕೊಳ್ಳಲಿದೆ. ಈಗಾಗಲೇ ಅಮೆರಿಕದಲ್ಲಿ ಶಿಂಜಿಯಾಂಗ್​ನ ಟೊಮ್ಯಾಟೋ, ಹತ್ತಿ ಮತ್ತು ಸೋಲಾರ್ ಉತ್ಪನ್ನಗಳ ಮೇಲೆ ಈಗಾಗಲೇ ನಿರ್ಬಂಧ ಇದೆ. ಇದೀಗ ಅದನ್ನು ಮತ್ತಷ್ಟು ಹೆಚ್ಚಿಸಲು ಬೈಡೆನ್ ಸರ್ಕಾರ ಮುಂದಾಗಿದೆ. ನೇರವಾಗಿ ಮಾತ್ರವಲ್ಲ. ಇನ್​ಡೈರೆಕ್ಟಾಗಿ ಶಿಂಜಿಯಾಂಗ್ ನೆಟ್​​ವರ್ಕ್​​ಗಳ ಜೊತೆ ಸಂಪರ್ಕ ಹೊಂದಿದ್ರೂ ಅದನ್ನು ಕಾನೂನು ಉಲ್ಲಂಘನೆಯಾಗಬಹುದು ಹುಷಾರ್ ಅಂತ ಈಗಾಗಲೇ ತನ್ನ ವ್ಯವಹಾರಗಳಿಗೆ ಎಚ್ಚರ ಕೂಡ ನೀಡಿದೆ. ಅಂದಹಾಗೆ ಶಿಂಜಿಯಾಂಗ್​ನಲ್ಲಿ 2016ರಿಂದ ಉಘರ್ ಸೇರಿದಂತೆ ಹಲವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಲಾಗ್ತಿದೆ. 10 ಲಕ್ಷದಷ್ಟು ಮಂದಿ ಬಳಿ ಬಲವಂತವಾಗಿ ಕೆಲಸ ಮಾಡಿಸಲಾಗ್ತಿದೆ ಅನ್ನೋ ಆರೋಪ ಕೇಳಿ ಬರುತ್ತಲೇ ಇದೆ.

-masthmagaa.com

Contact Us for Advertisement

Leave a Reply