ಮಾಜಿ ತಾಲಿಬಾನ್ ಕಮಾಂಡರ್ ವಿರುದ್ಧ ಅಮೆರಿಕ ಹೊಸ ಚಾರ್ಜ್​!

masthmagaa.com:

ಮಾಜಿ ತಾಲಿಬಾನ್ ಕಮಾಂಡರ್ ವಿರುದ್ಧದ ಚಾರ್ಜ್​ಶೀಟ್​​ನಲ್ಲಿ ಅಮೆರಿಕದ ಸರ್ಕಾರಿ ಅಭಿಯೋಜಕರು ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಗಳನ್ನು ಸೇರಿಸಿದ್ದಾರೆ. 45 ವರ್ಷದ ಹಜಿ ನಜೀಬುಲ್ಲಾನನ್ನು ಕಳೆದ ವರ್ಷ ಯುಕ್ರೇನ್​​ನಲ್ಲಿ ಅರೆಸ್ಟ್​ ಮಾಡಿ, ಅಮೆರಿಕಗೆ ಗಡೀಪಾರು ಮಾಡಲಾಗಿತ್ತು. ಈತನ ವಿರುದ್ಧ ಅಮೆರಿಕದ ಪತ್ರಕರ್ತ ಮತ್ತು ಇಬ್ಬರು ನಾಗರಿಕರ ಅಪಹರಣದ ಆರೋಪಗಳಿದ್ವು. ಆದ್ರೆ ನ್ಯೂಯಾರ್ಕ್​ನ ಸರ್ಕಾರಿ ಅಭಿಯೋಜಕರು ಈಗ ಆತನ ಆರೋಪ ಪಟ್ಟಿಯಲ್ಲಿ ಕೊಲೆ ಮತ್ತು ಭಯೋತ್ಪಾದನೆ ಅಪರಾಧಗಳನ್ನು ಸೇರಿಸಿದ್ದಾರೆ. 2008ರಲ್ಲಿ ಈತನ ನೇತೃತ್ವದಲ್ಲಿ ತಾಲಿಬಾನಿ ಫೈಟರ್​ಗಳು ಅಮೆರಿಕದ ಮಿಲಿಟರಿ ಪಡೆ ಮೇಲೆ ದಾಳಿ ನಡೆಸಿತ್ತು. ಇದ್ರಲ್ಲಿ ಮೂವರು ಅಮೆರಿಕನ್ ಯೋಧರು ಮತ್ತು ಓರ್ವ ಭಷಾಂತರಕಾರ ಪ್ರಾಣ ಕಳ್ಕೊಂಡಿದ್ದ ಅಂತ ಅಮೆರಿಕದ ಜಸ್ಟೀಸ್ ಡಿಪಾರ್ಟ್​ಮೆಂಟ್​ ಹೇಳಿದೆ.

-masthmagaa.com

Contact Us for Advertisement

Leave a Reply