ಅಮೆರಿಕದಲ್ಲಿ 10 ಸಾವಿರ ಕೋಟಿ ಮೊತ್ತದ ಮಾದಕ ವಸ್ತು ಜಪ್ತಿ!

masthmagaa.com:

ಅಮೆರಿಕದ ಕರಾವಳಿ ತೀರದಲ್ಲಿ 140 ಕೋಟಿ ಡಾಲರ್ ಅಂದ್ರೆ ರೂಪಾಯಿ ಲೆಕ್ಕದಲ್ಲಿ 10,360 ಕೋಟಿ ಮೊತ್ತದ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ಇದು 27 ಟನ್ ಅಂದ್ರೆ 27 ಸಾವಿರ ಕೆಜಿಗೂ ಹೆಚ್ಚು ತೂಕವಿದೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫ್ಲೋರಿಡಾದ ಕರಾವಳಿ ತೀರದ ವಿವಿಧ ಕೋಸ್ಟ್​ ಗಾರ್ಡ್​ ಘಟಕಗಳು ಸೇರ್ಕೊಂಡು ಈ ಕಾರ್ಯಾಚರಣೆ ನಡೆಸಿವೆ. ಈ ಭಾಗದಲ್ಲಿ ಒಂದೇ ಸಲ ಇಷ್ಟು ಮಾದಕ ವಸ್ತು ಪತ್ತೆಯಾಗಿದ್ದು ಇತಿಹಾಸದಲ್ಲೇ ಇದೇ ಮೊದಲು..2020ರ ಇಡೀ ವರ್ಷದಲ್ಲಿ ಎಷ್ಟು ಮಾದಕ ವಸ್ತು ಸೀಜ್ ಮಾಡಿದ್ವೋ ಅದಕ್ಕಿಂತ ಎರಡು ಪಟ್ಟು ಜಾಸ್ತಿ ಇದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply