ಅಮೆರಿಕದಲ್ಲಿ ಒಂದೇ ದಿನ 2,228 ಮಂದಿ ಬಲಿ..!

masthmagaa.com:

ಕೊರೋನಾ ಸೋಂಕಿತರು ಹಾಗೂ ಅದರಿಂದ ಮೃತಪಟ್ಟವರ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರೋ ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ 2,228 ಮಂದಿ ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಇಷ್ಟು ಜನ ಪ್ರಾಣ ಕಳೆದುಕೊಂಡಿರೋದು ಇದೇ ಮೊದಲು.

ಜನಸಂಖ್ಯೆಯಲ್ಲಿ ವಿಶ್ವದ ಮೂರನೇ ದೊಡ್ಡ ರಾಷ್ಟ್ರವಾದ ಅಮೆರಿಕದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 26 ಸಾವಿರದ ಗಡಿ ದಾಟಿದೆ. 6 ಲಕ್ಷಕ್ಕೂ ಹೆಚ್ಚು ಜನರಿಗೆ ಕಾಯಿಲೆ ತಗುಲಿದೆ. ಇದು ಯಾವುದೇ ರಾಷ್ಟ್ರಕ್ಕಿಂತ ಮೂರು ಪಟ್ಟು ಹೆಚ್ಚು. ಇದುವರೆಗೆ 48 ಸಾವಿರ ಮಂದಿ ಗುಣಮುಖರಾಗಿದ್ದಾರೆ.

ಸ್ಮಶಾನದಂತಾಗಿರೋ ನ್ಯೂಯಾರ್ಕ್​ ರಾಜ್ಯ ಒಂದರಲ್ಲೇ 2 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 11 ಸಾವಿರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ, ಮಿಚಿಗನ್, ಕ್ಯಾಲಿಫೋರ್ನಿಯಾಗಳಲ್ಲೂ ಕಾಯಿಲೆ ಹಾವಳಿ ಜೋರಾಗಿದೆ.

-masthmagaa.com

Contact Us for Advertisement

Leave a Reply