ಚೀನಾದ ಪೆಂಗ್ ಶುಯ್ ನಾಪತ್ತೆ! ತನಿಖೆಯಾಗಲಿ ಎಂದ ಅಮೆರಿಕ

masthmagaa.com:

ಚೀನಾದ ಫೇಮಸ್ ಟೆನ್ನಿಸ್ ಆಟಗಾರ್ತಿ ಪೆಂಗ್ ಶುಯ್​​​​ ನಾಪತ್ತೆಯಾಗಿರೋದು ಈಗ ವಿಶ್ವ ಮತ್ತೊಮ್ಮೆ ಚೀನಾವನ್ನು ಅನುಮಾನದ ಕಣ್ಣುಗಳಿಂದ ನೋಡುವಂತಾಗಿದೆ. ಇದೀಗ ಅಮೆರಿಕ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಪೆಂಗ್ ಶುಯ್ ಎಲ್ಲಿದ್ದಾರೆ..? ಏನ್ ಕಥೆ ಅನ್ನೋ ಬಗ್ಗೆ ಚೀನಾ ಸಾಕ್ಷ್ಯ ನೀಡಬೇಕು ಅಂತ ಹೇಳಿದೆ. ಅಂದಹಾಗೆ ಪೆಂಗ್​​​ಶುಯ್ ಈ ಹಿಂದೆ ಚೀನಾದ ಪ್ರಭಾವಿ ರಾಜಕಾರಣಿ, ಮಾಜಿ ಉಪಪ್ರಧಾನಿ ಝಂಗ್​ ಗವೋಲಿ ವಿರುದ್ಧ ಮೀಟೂ ಆರೋಪ ಮಾಡಿದ್ರು. ಇದಾದ ಬಳಿಕ ಪೆಂಗ್ ಶುಯ್ ನಾಪತ್ತೆಯಾಗಿದ್ದು, ಅವರೆಲ್ಲಿದ್ದಾರೆ.. ಏನಾಗಿದೆ ಅಂತ ಯಾರಿಗೂ ಗೊತ್ತಿಲ್ಲ. ಅವರ ಆರೋಪಗಳನ್ನು ಕೂಡ ಇಂಟರ್​ನೆಂಟ್​​ನಿಂದ ತೆಗೆದು ಹಾಕಿದೆ ಚೀನಾ.. ಇದೀಗ ಈ ಆರೋಪದ ಬಗ್ಗೆಯೂ ಪಾರದರ್ಶಿ ತನಿಖೆ ನಡೆಯಬೇಕು ಅಂತ ಕೂಡ ಅಮೆರಿಕ ಎಚ್ಚರಿಸಿದೆ. ಇತ್ತೀಚೆಗಷ್ಟೇ ಪೆಂಗ್ ಶುಯ್ ನಾಪತ್ತೆ ಬಗ್ಗೆ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್​​ ಆತಂಕ ವ್ಯಕ್ತಪಡಿಸಿದ್ರು. ಅಂದಹಾಗೆ ಪೆಂಗ್ ಶುಯ್​​​ 2013ರಲ್ಲಿ ವಿಂಬಲ್ಡನ್ ಡಬಲ್ಸ್ ಮತ್ತು 2014ರಲ್ಲಿ ಫೆಂಚ್ ಓಪನ್​​ನಲ್ಲಿ ಗೆದ್ದುಕೊಂಡಿದ್ರು. 35 ವರ್ಷದ ಈಕೆ ಮೂರು ಬಾರಿ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply