ಮರುಭೂಮಿಯಲ್ಲಿ 119 ಪರಮಾಣು ಶಸ್ತ್ರಾಸ್ತ್ರಗಳನ್ನ ಅಭಿವೃದ್ಧಿಪಡಿಸ್ತಿದೆ ಚೀನಾ!

masthmagaa.com:

ಅಮೆರಿಕ, ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಜೊತೆಗೆ ಒಂದಲ್ಲಾ ಒಂದು ರೀತಿಯಲ್ಲಿ ಸಂಘರ್ಷ ನಡೆಸ್ತಿರೋ ಚೀನಾ ಇದೀಗ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನ ಹೆಚ್ಚಿಸಿಕೊಳ್ತಿದೆ ಅನ್ನೋ ವಿಚಾರ ಬಹಿರಂಗವಾಗಿದೆ. ಚೀನಾದ ಗಾನ್ಷು ಪ್ರಾಂತ್ಯದ ಯುಮೆನ್​ ಸಮೀಪದ ಮರುಭೂಮಿ ಪ್ರದೇಶದಲ್ಲಿ ಸುಮಾರು 119 ಮಿಸೈಲ್​ ಸಿಲೋಸ್​ಗಳನ್ನ ಅಭಿವೃದ್ಧಿಪಡಿಸುತ್ತಿರೋದು ಉಪಗ್ರಹ​ ಚಿತ್ರಗಳಲ್ಲಿ ಗೊತ್ತಾಗಿದೆ. ಸಿಲೋಸ್ ಅಂದ್ರೆ ಕ್ಷಿಪಣಿ ಉಡಾವಣೆಯ ವ್ಯವಸ್ಥೆ ಅನ್ಬೋದು. ಇದು ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಬತ್ತಳಿಕೆಯನ್ನ ಹೆಚ್ಚಿಸಿಕೊಳ್ಳೋ ಪ್ರಯತ್ನ ಇರಬಹುದು ಅಂತ ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಇನ್ನು ಸುಮಾರು 1,800 ಚದರ ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಹರಡಿಕೊಂಡಿರೋ ಈ ಸೈಟ್​ನಲ್ಲಿ, ಅಂಡರ್​ಗ್ರೌಂಡ್​ ಬಂಕರ್ಸ್​, ಕೇಬಲ್​ ಟ್ರೆಂಚ್​ಗಳು, ರಸ್ತೆ ಮತ್ತು ಸಣ್ಣದೊಂದು ಸೇನಾ ನೆಲೆ ಇದೆ. ಅಂದ್ಹಾಗೆ ಪರಮಾಣು ಶಸ್ತ್ರಾಸ್ತ್ರಗಳ ರೇಸ್​ನಲ್ಲಿ ಅಮೆರಿಕ ಮತ್ತು ರಷ್ಯಾಗಿಂತ ತುಂಬಾ ಹಿಂದಿದೆ ಚೀನಾ. ಅದರ ಬಳಿ ಸುಮಾರು 350 ಪರಮಾಣು ಶಸ್ತ್ರಾಸ್ತ್ರಗಳು ಇರಬಹುದು ಅಂತ ಅಂದಾಜಿಸಲಾಗಿದೆ. ಆದ್ರೆ ಇದು ಭದ್ರತೆ ವಿಚಾರ ಆಗಿರೋದ್ರಿಂದ ಯಾವ ದೇಶ ಕೂಡ ತನ್ನ ಬಳಿ ಇಷ್ಟೇ ಪರಮಾಣು ಶಸ್ತ್ರಾಸ್ತ್ರ ಇದೆ ಅಂತ ಹೇಳಿಕೊಳ್ಳಲ್ಲ. ಇನ್ನು ವೇಗವಾಗಿ ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಬತ್ತಳಿಕೆಯನ್ನ ಹೆಚ್ಚು ಮಾಡ್ತಿರೋ​ ಬಗ್ಗೆ ಮಾತನಾಡಿರೋ ಅಮೆರಿಕದ ಸ್ಟೇಟ್​ ಡಿಪಾರ್ಟ್​ಮೆಂಟ್​ನ ವಕ್ತಾರ ನೆಡ್​ ಪ್ರೈಸ್​, ಶಸ್ತ್ರಾಸ್ತ್ರಗಳ ಪೈಪೋಟಿಯನ್ನ ಕಮ್ಮಿ ಮಾಡಲು ಚೀನಾ ಪ್ರಾಕ್ಟಿಕಲ್​ ಆಗಿ ಕೆಲವೊಂದು ಕ್ರಮಗಳನ್ನ ಕೈಗೊಳ್ಳಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply