ಅಮೆರಿಕ ಅಧ್ಯಕ್ಷರಿಗೇ ಭದ್ರತಾ ಲೋಪ! ಬೈಡೆನ್‌ ಮನೆ ಮೇಲೆ ಹಾರಿತು ವಿಮಾನ!

masthmagaa.com:

ವಿಶ್ವದ ಶಕ್ತಿಶಾಲಿ ದೇಶ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರ ನಿವಾಸದಲ್ಲೇ ಭದ್ರತಾ ಲೋಪ ಉಂಟಾಗಿದೆ. ಡೆಲವೇರ್ ನಿವಾಸದ ಬಳಿ ನಿರ್ಬಂಧಿತ ವಾಯುಪ್ರದೇಶದಲ್ಲಿ ನಾಗರಿಕ ವಿಮಾನವೊಂದು ಹಾರಾಟ ನಡೆಸಿದೆ. ನಿನ್ನೆ ಅಂದ್ರೆ ಅಕ್ಟೋಬರ್ 28 ರಂದುಬೈಡೆನ್‌ ಮನೆಯಲ್ಲಿದ್ದಾಗಲೇ ಈ ಘಟನೆ ನಡೆದಿದೆ. ಕೂಡಲೇ ಅಮೆರಿಕದ ಯುದ್ಧ ವಿಮಾನಗಳು ನಾಗರಿಕ ವಿಮಾನವನ್ನು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗ್ತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.
ಅಂದ್ಹಾಗೆ ಬೈಡೆನ್‌ ಅವರ ಭದ್ರತೆಯಲ್ಲಿ ಲೋಪ ಉಂಟಾಗ್ತಿರೋದು ಇದೇ ಮೊದಲ ಬಾರಿಯೇನೂ ಅಲ್ಲ. ಆಗಾಗ ಈ ರೀತಿಯ ವಿಮಾನಗಳು ಹಾರಿ ಭದ್ರತಾ ಲೋಪ ಉಂಟಾಗ್ತನೇ ಇರುತ್ತವೆ. ಕಳೆದ ಜೂನ್‌ ತಿಂಗಳಲ್ಲೂ ಈ ರೀತಿ ಆಗಿತ್ತು.

-masthmagaa.com

Contact Us for Advertisement

Leave a Reply