ಭಾರತ – ಚೀನಾ ಸಂಬಂಧ ಹೇಗಿದೆ ಅಂದ್ರೆ… ಅಮೆರಿಕ ಏನ್‌ ಹೇಳಿದೆ ಗೊತ್ತಾ?

masthmagaa.com:

ಭಾರತ ಹಾಗೂ ಚೀನಾ ನಡುವೆ ಇರೋದು ಒತ್ತಾಯದ ಸ್ನೇಹ ಅಂತ ಅಮೆರಿಕ ಹೇಳಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಅಲ್ಲಿನ ಸೆನೆಟ್‌ಗೆ ಸಲ್ಲಿಸಿದ ವರದಿಯಲ್ಲಿ ಇದನ್ನ ಉಲ್ಲೇಖಿಸಲಾಗಿದ್ದು ಇತ್ತೀಚಿಗೆ ಅವರ ಗಡಿಯಲ್ಲಿ ನಡೆದ ಸಂಘರ್ಷಗಳಿಂದ ಉಭಯ ದೇಶಗಳ ನಡುವೆ ಸಂಬಂಧ ಸರಿಯಿಲ್ಲ. ಇಬ್ಬರ ಮಧ್ಯೆ ಈಗ ಉಳಿದಿರೋದು ಒತ್ತಾಯದ ಸ್ನೇಹ ಅಷ್ಟೇ. ಇದು ಈ ದಶಕದಲ್ಲೇ ಅತ್ಯಂತ ಹೀನಾಯ ಮತ್ತು ಗಂಭೀರ ಸ್ಥಿತಿ ತಲುಪಿದೆ. ಅಲ್ಲದೇ ಎರಡೂ ರಾಷ್ಟ್ರಗಳ ಸೈನಿಕರು ವಿವಾದಿತ ಪ್ರದೇಶದಲ್ಲಿ ಸಜ್ಜಾಗಿಯೇ ಇದ್ದಾರೆ. ಅಣ್ವಸ್ತ್ರ ಹೊಂದಿರೋ ಈ ಎರಡು ರಾಷ್ಟ್ರಗಳ ಮಧ್ಯೆ ಸಂಘರ್ಷ ಉಂಟಾದ್ರೆ ತುಂಬಾ ಸಮಸ್ಯೆ ಉಂಟಾಗುತ್ತೆ. ಹಾಗಾಗಿ ಅಮೆರಿಕ ಮಧ್ಯಸ್ಥಿಕೆ ವಹಿಸಿ ಇಬ್ಬರ ನಡುವಿನ ಗೊಂದಲವನ್ನ ಸರಿ ಮಾಡ್ಬೇಕು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply