ಚೀನಾ ವಿರುದ್ದ ಜಪಾನ್‌ಗೆ ಸಾಥ್‌ ನೀಡಿದ ಅಮೆರಿಕ!

masthmagaa.com:

ಅಮೆರಿಕ ಮತ್ತು ಜಪಾನ್‌ ದೇಶಗಳು ಪರಸ್ಪರ ಭದ್ರತಾ ಸಹಕಾರವನ್ನ ಹೆಚ್ಚಿಸಿಕೊಳ್ಳೋದಾಗಿ ಅನೌನ್ಸ್‌ ಮಾಡಿವೆ. ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಎದುರಿಸುತ್ತಿರೋ ಚಾಲೆಂಜ್‌ ಅಂದ್ರೆ ಚೀನಾ. ಅದನ್ನ ನಾವು ಒಪ್ಪಿಕೊಳ್ಳುತ್ತೇವೆ ಅಂತ ಅಮೆರಿಕದ ಸೆಕ್ರಟರಿ ಆಫ್‌ ಸ್ಟೇಟ್ ಆಂಥನಿ ಬ್ಲಿಂಕನ್‌ ಹೇಳಿದ್ದಾರೆ. ಹಾಗೂ ಜಪಾನ್‌ನಲ್ಲಿ ಅಮೆರಿಕದ Marine Littoral Regiment ಅಂದ್ರೆ ಸಾಗರ ಸೇನಾ ಪಡೆಯೊಂದನ್ನ ನಿಯೋಜನೆ ಮಾಡಲಾಗುತ್ತೆ. ಇದ್ರಿಂದ ಆಂಟಿ ಶಿಪ್‌ ಮಿಸೈಲ್‌ ಸೇರಿದಂತೆ ಇತರ ಸೌಲಭ್ಯ ಒದಗಿಸಲಾಗುತ್ತೆ ಅಂತ ಅಮೆರಿಕದ ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌ ಹೇಳಿದ್ದಾರೆ. ಅಂದ್ಹಾಗೆ ಜನವರಿ 13ರಂದು ಅಂದ್ರೆ ನಾಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿದಾ ಭೇಟಿ ಮಾಡಲಿದ್ದಾರೆ. ಇದಕ್ಕೂ ಮುಂಚೆ ಅಮೆರಿಕ ಹಾಗೂ ಜಪಾನ್‌ ನಮ್ಮ ಸಂಬಂಧವನ್ನ ಮತ್ತಷ್ಟು ಗಟ್ಟಿಮಾಡ್ತೀವಿ ಅಂತ ಅನೌನ್ಸ್‌ ಮಾಡಿವೆ. ಇತ್ತೀಚೆಗೆ ತಾನೇ ಜಪಾನ್‌ ಚೀನಾವನ್ನ ಗಮನದಲ್ಲಿಟ್ಟುಕೊಂಡು ಎರಡನೇ ಮಹಾಯುದ್ದದ ನಂತರ ಕಂಡರಿಯದ ರೀತಿಯಲ್ಲಿ ತನ್ನ ಸೇನೆಗೆ ದುಡ್ಡು ಸುರಿಯೋಕೆ ಮುಂದಾಗಿತ್ತು.

-masthmagaa.com

Contact Us for Advertisement

Leave a Reply