‘ಹಂದಿ ಹಾರ್ಟ್’ ಕಸಿ ಆಗಿದ್ದ ರೋಗಿ 62 ದಿನಗಳಲ್ಲಿ ಸಾವು!

masthmagaa.com:

ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ರೋಗಿ ಈಗ ಪ್ರಾಣ ಬಿಟ್ಟಿದ್ದಾರೆ. ಅಮೆರಿಕದಲ್ಲಿ ಡೇವಿಡ್ ಬೆನ್ನೆಟ್ ಎಂಬ 57 ವರ್ಷದ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ರು. ಅಕ್ಟೋಬ ರ್​ನಿಂದಲೂ ಮೇರಿಲ್ಯಾಂಡ್ ಆಸ್ಪತ್ರೆಯಲ್ಲಿ ಲೈಫ್ ಸಪೋರ್ಟ್ ಮಶೀನ್​ನಲ್ಲಿದ್ರು. ಕೆಲವೊಂದು ಕಾರಣಗಳಿಂದಾಗಿ ಅವರಿಗೆ ಮನುಷ್ಯರ ಅಂಗಾಂಗ ಕಸಿ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಎರಡು ತಿಂಗಳ ಹಿಂದೆ ಅಂದ್ರೆ ಜನವರಿ 7ರಂದು ಬೆನ್ನೆಟ್​​​ಗೆ ಹಂದಿಯ ಹೃದಯ ಕಸಿ ಮಾಡಲಾಗಿತ್ತು. ಇದಕ್ಕೆ ಕುಟುಂಬಸ್ಥರು ಕೂಡ ಒಪ್ಪಿಗೆ ಸೂಚಿಸಿದ್ರು. ಆದ್ರೆ ಅವರೀಗ 2 ತಿಂಗಳು ಅಂದ್ರೆ 62 ದಿನಗಳ ಬಳಿಕ ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಮೇರಿಲ್ಯಾಂಡ್ ಆಸ್ಪತ್ರೆಯ ವೈದ್ಯರ ತಂಡ, ಕೆಲ ದಿನಗಳ ಹಿಂದೆ ಅವರ ಆರೋಗ್ಯ ಹದಗೆಡೋಕೆ ಶುರುವಾಯ್ತು. ಅವರು ಹೆಚ್ಚು ದಿನ ಬದುಕೋದು ಅಸಾಧ್ಯ ಅನ್ನೋದು ಕನ್ಫರ್ಮ್ ಆದ ಕೂಡಲೇ ಅವರನ್ನು ಕುಟುಂಬಸ್ಥರ ಜೊತೆಗೆ ಮಾತನಾಡಲು ಅವಕಾಶ ನೀಡಿದ್ವಿ. ಆದ್ರೂ ಕೂಡ ಹಂದಿಯ ಹೃದಯ ಅಳವಡಿಸಿದ ನಂತರ ಕೆಲವು ವಾರಗಳವರೆಗೆ ಅವರ ಆರೋಗ್ಯ ಚೆನ್ನಾಗಿತ್ತು. ಹಾರ್ಟ್ ಕೆಲಸ ಮಾಡ್ತಿತ್ತು. ಯಾವುದೇ ರೀತಿಯ ಪ್ರತಿರೋಧ ಎದುರಾಗಿರಲಿಲ್ಲ..ತಮ್ಮ ಕುಟುಂಬಸ್ಥರೊಂದಿಗೆ ಮಾತಾಡಿದ್ದ ಬೆನ್ನೆಟ್​, ಫಿಸಿಯೋ ಥೆರಪಿಗೂ ಒಳಗಾಗಿದ್ರು. ಸುಪರ್ ಬೌಲ್ ಪಂದ್ಯ ಕೂಡ ವೀಕ್ಷಿಸಿದ್ದ ಅವರು, ನಾನು ಮನೆಗೆ ಹೋಗ್ಬೇಕು ನಾಯಿ ಲಕ್ಕಿಯನ್ನು ನೋಡ್ಬೇಕು ಅಂತ ಹೇಳಿಕೊಂಡಿದ್ರು ಅಂತ ಕೂಡ ಆಸ್ಪತ್ರೆ ತಿಳಿಸಿದೆ. ಜೊತೆಗೆ ಮುಂದೊಂದು ದಿನ ಈ ಪ್ರಯೋಗದಲ್ಲಿ ಕಂಪ್ಲೀಟಾಗಿ ಯಶಸ್ಸು ಕಾಣ್ತೀವಿ ಅನ್ನೋ ಭರವಸೆ ಕೂಡ ನಮಗಿದೆ ಅಂತ ವೈದ್ಯರ ತಂಡ ವಿಶ್ವಾಸ ವ್ಯಕ್ತಪಡಿಸಿದೆ. ಆದ್ರೂ ಕೂಡ 62 ದಿನಗಳವರೆಗೆ ಹಂದಿ ಹೃದಯಲ್ಲಿ ಬೆನ್ನೆಟ್ ಜೀವಂತವಾಗಿ ಇದ್ದಿದ್ದು ಸಣ್ಣ ವಿಷಯವೇನೂ ಅಲ್ಲ.. ವೈಜ್ಞಾನಿಕ ಲೋಕದಲ್ಲಿ ಇದೊಂದು ದೊಡ್ಡ ಹೆಜ್ಜೆ ಅನ್ನೋದು ತಜ್ಞರ ಅಭಿಪ್ರಾಯ..

-masthmagaa.com

Contact Us for Advertisement

Leave a Reply