masthmagaa.com:

ಅಮೆರಿಕದಲ್ಲಿ ಸಾವಿನ ಓಟ ಮುಂದುವರಿಸಿರೋ ಕೊರೋನಾ ಮಹಾಮಾರಿಗೆ 20,600 ಮಂದಿ ಮೃತಪಟ್ಟಿದ್ದಾರೆ ಅಂತ ಜಾನ್ ಹಾಪ್ಕಿನ್ಸ್​ ಯುನಿವರ್ಸಿಟಿ ಹೇಳಿದೆ. ಈ ಮೂಲಕ ಸಾವಿನ ಸಂಖ್ಯೆಯಲ್ಲಿ ಇಷ್ಟುದಿನ ಮೊದಲ ಸ್ಥಾನದಲ್ಲಿದ್ದ ಇಟಲಿಯನ್ನೇ ಮೀರಿಸಿದೆ. ಇಟಲಿಯಲ್ಲಿ ಕೊರೋನಾ ಸೋಂಕಿಗೆ 19,500 ಜನ ಪ್ರಾಣ ಕಳೆದುಕೊಂಡಿದ್ದು, 1.5 ಲಕ್ಷ ಮಂದಿಗೆ ಕಾಯಿಲೆ ತಗುಲಿದೆ.

ಅಮೆರಿಕದಲ್ಲಿ ಕೊರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ 5.3 ಲಕ್ಷ ದಾಟಿದೆ. ನ್ಯೂಯಾರ್ಕ್​ ರಾಜ್ಯದಲ್ಲೇ 1.8 ಲಕ್ಷ ಜನರಿಗೆ ಸೋಂಕು ತಗುಲಿದ್ದು, 7 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ನ್ಯೂಜೆರ್ಸಿ, ಮಿಚಿಗನ್, ಇಲ್ಲಿನಾಯ್ಸ್, ಕ್ಯಾಲಿಫೋರ್ನಿಯಾ, ವಾಷಿಂಗ್ಟನ್ ರಾಜ್ಯಗಳು ತತ್ತರಿಸಿ ಹೋಗಿವೆ.

-masthmagaa.com

Contact Us for Advertisement

Leave a Reply