ಜೋ ಬೈಡೆನ್ ಮೊದಲ ವಿದೇಶ ಪ್ರವಾಸ ಎಲ್ಲಿಗೆ ಗೊತ್ತಾ?

masthmagaa.com:

ಜೋ ಬೈಡೆನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಈವರೆಗೆ ಸಾಗರೋತ್ತರ ಪ್ರಯಾಣ ಕೈಗೊಂಡಿಲ್ಲ. ಇದೀಗ ತಮ್ಮ ಮೊದಲ ಸಾಗರೋತ್ತರ ಪ್ರವಾಸದಲ್ಲಿ ಯುನೈಟೆಡ್ ಕಿಂಗ್​​ಡಮ್​​​ಗೆ ಭೇಟಿ ನೀಡಲಿದ್ದಾರೆ. ಇಂಗ್ಲೆಂಡ್​​ನಲ್ಲಿ ಜೂನ್ 11ರಿಂದ 13ರವರೆಗೆ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಬೈಡೆನ್ ಭಾಗಿಯಾಗಲಿದ್ದಾರೆ. ನಂತರ ಅಲ್ಲಿಂದ ಬ್ರಸೆಲ್​​ಗೆ ಭೇಟಿ ನೀಡಿ ಯೂರೋಪಿಯನ್ ಯೂನಿಯನ್ ಒಕ್ಕೂಟದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ನ್ಯಾಟೋ ಅಂದ್ರೆ ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಇದಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​​​​​ಗೂ ಕೂಡ ಆಮಂತ್ರಣ ನೀಡಿದ್ದಾರೆ ಬೈಡೆನ್​​.

-masthmagaa.com

Contact Us for Advertisement

Leave a Reply