ಅಮೆರಿಕದಲ್ಲಿ 4 ಲಕ್ಷ ಸೋಂಕಿತರು.. ಇಟಲಿ ಹಿಂದಿಕ್ಕಿದ ನ್ಯೂಯಾರ್ಕ್​

masthmagaa.com:

ಅಮೆರಿಕದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೋನಾ ವೈರಸ್ ಮಂಗಳವಾರ​ ಒಂದೇ ದಿನ 1,736 ಜನರನ್ನು ಬಲಿ ಪಡೆದಿದೆ. ಒಂದೇ ದಿನದಲ್ಲಿ ಈ ಪ್ರಮಾಣದ ಸಾವು ಸಂಭವಿಸಿರೋದು ಇದೇ ಮೊದಲು. ಈ ಮೂಲಕ ಅಮೆರಿಕದಲ್ಲಿ ಮಹಾಮಾರಿಗೆ ಮೃತಪಟ್ಟವರ ಸಂಖ್ಯೆ 12,800ಕ್ಕೆ ಏರಿಕೆಯಾಗಿದೆ. ಜೊತೆಗೆ 4 ಲಕ್ಷ ಜನರಿಗೆ ಸೋಂಕು ತಗುಲಿದೆ ಅಂತ ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಹೇಳಿದೆ. ಇಡೀ ಜಗತ್ತಿನಲ್ಲಿ 14 ಲಕ್ಷ ಸೋಂಕಿತರಿದ್ದು, ಈ ಪೈಕಿ ಅಮೆರಿಕದಲ್ಲೇ 4 ಲಕ್ಷ ಇದ್ದಾರೆ.

ಇನ್ನು ನರಕದಂತಾಗಿರೋ ನ್ಯೂಯಾರ್ಕ್​ನಲ್ಲಿ ಒಂದೇ ದಿನ 731 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನ್ಯೂಯಾರ್ಕ್​​ನಲ್ಲಿ ಒಂದೇ ದಿನ ಸಂಭವಿಸಿದ ಅತಿ ಹೆಚ್ಚು ಸಾವು ಇದಾಗಿದೆ. ಈ ಮೂಲಕ ನ್ಯೂಯಾರ್ಕ್​​​ನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 4,000ಕ್ಕೆ ಏರಿಕೆಯಾಗಿದೆ. ಅಲ್ಲದೆ ಸೋಂಕಿತರ ಸಂಖ್ಯೆಯಲ್ಲಿ ನ್ಯೂಯಾರ್ಕ್​ ರಾಜ್ಯ ಇಟಲಿಯನ್ನು ಹಿಂದಿಕ್ಕಿದೆ. ಇಟಲಿಯಲ್ಲಿ 1.35 ಲಕ್ಷ ಜನರಿಗೆ ಸೋಂಕು ತಗುಲಿದ್ರೆ, ನ್ಯೂಯಾರ್ಕ್​ನಲ್ಲಿ 1.39 ಲಕ್ಷ ಜನರಿಗೆ ಕಾಯಿಲೆ ಹರಡಿದೆ.

-masthmagaa.com

Contact Us for Advertisement

Leave a Reply