ಅರ್ಧ ಶತಮಾನದ ನಂತರ ಚಂದ್ರನ ಮೇಲೆ ಕಾಲಿಟ್ಟ ಅಮೆರಿಕ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕ ಮತ್ತೊಮ್ಮೆ ಚಂದ್ರನ ಮೇಲೆ ಕಾಲಿಟ್ಟಿದೆ. ಆದ್ರೆ ಈ ಬಾರಿ ನಾಸಾ ಅಲ್ಲ. ಅಮೆರಿಕದ ಪ್ರೈವೇಟ್‌ ಬಾಹ್ಯಾಕಾಶ ಸಂಸ್ಥೆವೊಂದು ಚಂದ್ರನ ಸೌತ್‌ ಪೋಲ್‌ ಬಳಿ ತನ್ನ ಸ್ಪೇಸ್‌ಕ್ರಾಫ್ಟನ್ನ ಇಳಿಸಿದೆ. ಹೌಸ್ಟನ್‌ ಮೂಲದ ಇಂಟುವ್ಟಿವ್‌ ಮಷಿನ್ಸ್‌ ಅನ್ನೋ ಕಂಪನಿ ಈ ಸಾಧನೆ ಮಾಡಿ, ಚಂದ್ರನ ಮೇಲೆ ಸೇಫ್‌ ಲ್ಯಾಂಡಿಂಗ್‌ ಮಾಡಿದ ಮೊದಲನೇ ಖಾಸಗೀ ಸಂಸ್ಥೆ ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಈ ಕಂಪನಿ ತನ್ನ ಒಡಿಶಿಯಸ್‌ ರೋಬೋಟ್‌ನ್ನ ಚಂದ್ರನ ಮೇಲೆ ಲ್ಯಾಂಡ್‌ ಮಾಡಿದೆ. ಆ ಮೂಲಕ ಬರೋಬ್ಬರಿ 50 ವರ್ಷಗಳ ನಂತರ ಅಮೆರಿಕದ ಒಂದು ಸ್ಪೇಸ್‌ಕ್ರಾಪ್ಟ್‌ ಚಂದ್ರನ ಮೇಲ್ಮೈ ಟಚ್‌ ಮಾಡಿದೆ. 1972ರಲ್ಲಿ ಅಪೋಲೋ ಸೀರೀಸ್‌ನ ಕೊನೆಯ ಸ್ಪೇಸ್‌ಕ್ರಾಫ್ಟ್‌ ಚಂದ್ರನ ಮೇಲೆ ಲ್ಯಾಂಡ್‌ ಆಗಿತ್ತು. ಇನ್ನು ಈ ಲ್ಯಾಂಡರ್‌ ಲ್ಯಾಂಡ್‌ ಆಗೋ ಟೈಮಲ್ಲಿ ಕಂಪನಿಯ ಲೇಸರ್‌ಗಳು ಕೈ ಕೊಟ್ಟಿದ್ವು. ಆದ್ರೆ ಅದೃಷ್ಟವಶಾತ್‌ ಲ್ಯಾಂಡರ್‌ನಲ್ಲಿ ನಾಸಾ ನಿರ್ಮಿತ ಪ್ರಾಯೋಗಿಕ ಲೇಸರ್‌ ಸಿಸ್ಟಮ್‌ಗಳೂ ಇದ್ದಿದ್ರಿಂದ, ಸೇಫ್‌ ಲ್ಯಾಂಡಿಂಗ್‌ ಮಾಡೋಕೆ ಸಾಧ್ಯವಾಗಿದೆ. ಲ್ಯಾಂಡ್‌ ಆಗಿ ಸ್ವಲ್ಪ ಹೊತ್ತು ರೋಬೋಟ್‌ನ ಸಂಪರ್ಕ ಕಟ್‌ ಆಗಿತ್ತು. ಆದ್ರೆ ಕ್ರಮೇಣ ಸಿಗ್ನಲ್‌ ಸಿಕ್ಕಿ ಮತ್ತೆ ಕನೆಕ್ಟ್‌ ಮಾಡೋಕೆ ಸಾಧ್ಯವಾಗಿದೆ. ನಂತರ ಈ ರೋಬೋಟ್‌ ಕೆಲವು ಫೋಟೋಗಳನ್ನು ತೆಗೆದು ಕಳಿಸಿದೆ. ಚಂದ್ರನ ದಕ್ಷಿಣದ 80 ಡಿಗ್ರಿ ಅಕ್ಷಾಂಶದ ಪ್ರದೇಶದಲ್ಲಿ ಈ ರೋಬೋಟ್‌ ಲ್ಯಾಂಡ್‌ ಆಗಿದೆ. ಮುಂದಿನ ದಿನಗಳಲ್ಲಿ ನಾಸಾ ತನ್ನ ಆರ್ಟಿಮಿಸ್‌ ಪ್ರೋಗ್ರಾಂನಲ್ಲಿ ಗಗನಯಾನಿಗಳನ್ನ ಇಳಿಸೋ ಪ್ರದೇಶಗಳ ಶಾರ್ಟ್‌ಲಿಸ್ಟ್‌ನಲ್ಲಿ ಈ ಪ್ರದೇಶವೂ ಇದೆ. ಇನ್ನು ಈ ಒಡಿಶಿಯಸ್‌ನಲ್ಲಿ ರೋಬೋಟ್‌ನಲ್ಲಿ ನಾಸಾದ 6 ಪೇಲೋಡ್‌ಗಳನ್ನ ಇಂಟಿಗ್ರೇಟ್‌ ಮಾಡಲಾಗಿದೆ. ಜೊತೆಗೆ ಅಮೆರಿಕನ್‌ ವಿದ್ಯಾರ್ಥಿಗಳು ತಯಾರಿಸಿರೋ ಸ್ಟೂಡೆಂಟ್‌ ಕ್ಯಾಮೆರಾ ಸಿಸ್ಟಮ್‌ ಇದೆ. ಇದ್ರಿಂದ ರೋಬೋಟ್‌ ಸೆಲ್ಫಿಗಳನ್ನ ತೆಗೆದು ಕಳಿಸುತ್ತೆ. ಇನ್ನು ಈ ಲ್ಯಾಂಡರ್‌ ಪ್ರಾನ್‌ ಪ್ರಕಾರ ಸುಮಾರು ಒಂದು ವಾರವಷ್ಟೇ ಚಂದ್ರನ ಮೇಲೆ ಕೆಲಸ ಮಾಡಲಿದೆ. ಮುಖ್ಯವಾಗಿ ಲ್ಯಾಂಡ್‌ ಮಾಡುವಾಗ ಚಂದ್ರನ ಸರ್ಫೇಸ್‌ನಲ್ಲಿರೋ ಧೂಳು ಹೇಗೆ ರಿಯಾಕ್ಟ್‌ ಮಾಡುತ್ತೆ, ಮೇಲೆದ್ದ ದೂಳು ಯಾವ ರೀತಿ ವಾಪಸ್‌ ಸೆಟ್ಲ್‌ ಆಗುತ್ತೆ ಅನ್ನೋದನ್ನ ಅನಲೈಸ್‌ ಮಾಡಲಾಗತ್ತೆ. ಇನ್ನು ಈ ಲ್ಯಾಂಡರ್‌ನ್ನ ಸ್ಪೇಸ್‌ಎಕ್ಸ್‌ನ ರಾಕೆಟ್‌ನಲ್ಲಿ ಲಾಂಚ್‌ ಮಾಡಲಾಗಿತ್ತು. ಅಲ್ಲದೆ ಇಂಟುವ್ಟಿವ್‌ ಮಷಿನ್ಸ್‌ ಸಂಸ್ಥೆ ಈ ವರ್ಷ ಇನ್ನೂ ಎರಡು ಮೂನ್‌ ಲ್ಯಾಂಡಿಂಗ್‌ ಮಿಷನ್‌ ಮಾಡೋಕೆ ಪ್ಲಾನ್‌ ಮಾಡಿದೆ.

-masthmagaa.com

Contact Us for Advertisement

Leave a Reply