ಅವಳು UBER ಅಂತ ಮಿಸ್ ಆಗಿ ಹತ್ತಿದ್ದು ಸಾವಿನ ವಾಹನ!

masthmagaa.com:

ಅಮೆರಿಕದಲ್ಲಿ ಕೊಲೆ ಆರೋಪಿಯೊಬ್ಬನಿಗೆ ಜೀವಾವಧಿ ಶಿಕ್ಷೆಯಾಗಿದೆ. ಇಂಥದ್ ಆಗ್ತಾನೆ ಇರುತ್ತೆ ಎಲ್ಲಾ ಕಡೆ ಅಂತೀರಾ? ಹಾಗಿದ್ರೆ ಈ ನ್ಯೂಸ್ ಸ್ವಲ್ಪ ಗಮನ ಕೊಟ್ಟು ನೋಡಿ. 2019ರ ಮಾರ್ಚ್ ನಲ್ಲಿ ಸಮಂತಾ ಜೋಸೆಫ್ಸನ್ ಅನ್ನೋ 21 ವರ್ಷದ ಸೌಥ್ ಕ್ಯಾರೋಲಿನ ಯೂನಿವರ್ಸಿಟಿಯ ಸ್ಟೂಡೆಂಟ್ ತನ್ನ ಊಬರ್ ಕ್ಯಾಬ್ ಗೆ ವೇಯ್ಟ್ ಮಾಡ್ತಿದ್ಲು. ಆಗ ಊಬರ್ ಅನ್ಕೊಂಡು ಮಿಸ್ ಆಗಿ ಬೇರ್ಯಾದೋ ಕಾರ್ ಹತ್ತಿಬಿಟ್ಳು. ಆದ್ರೆ ಆ ಕಾರ್ ನಲ್ಲಿ ಆಗ ಯಾರೂ ಇರಲಿಲ್ಲ. ಇಳಿದುಹೋಗೋಣ ಅಂದ್ರೆ ಈಕೆ ಹತ್ತಿ ಕೂರುತ್ತಿದ್ದಂತೆ ಕಾರ್ ನಲ್ಲಿದ್ದ ಚೈಲ್ಡ್ ಪ್ರೂಫ್ ಲಾಕ್ ಆನ್ ಆಗಿ ಈಕೆ ಸ್ಟಕ್ ಆಗಿ ಹೋದ್ಲು. ಅಷ್ಟೇ.. ಆ ಮೇಲೆ ಸಮಂತಾಳನ್ನ ಯಾರೂ ಜೀವಂತವಾಗಿ ನೋಡೇ ಇಲ್ಲ! ಕೆಲ ದಿನಗಳ ಬಳಿಕ ಕೊಲಂಬಿಯಾದ 105 ಕಿಲೋಮೀಟರ್ ದೂರದಲ್ಲಿ ಅರಣ್ಯ ಪ್ರದೇಶದಲ್ಲಿ ಆಕೆಯ ಮೃತದೇಹ ಸಿಕ್ತು. ಆಕೆಯ ದೇಹದ ಮೇಲೆ 120 ಸಲ ಚಾಕುವಿನಿಂದ ಚುಚ್ಚಿದ ಗುರುತುಗಳಿದ್ವು. ಈ ವಿಚಾರ ಅಮೆರಿಕದಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯ್ತು. ತನಿಖೆಗಿಳಿದ ಪೊಲೀಸರಿಗೆ ಆ ಶೆವರ್ಲೇ ಇಂಪಾಲಾ ಕಾರಿನ ಮಾಲಿಕ, ನ್ಯಾತಾನೀಲ್ ರೋಲ್ಯಾಂಡ್ ತನಕ ತಲುಪೋಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಘಟನೆಗೆ 36ಕ್ಕೂ ಅಧಿಕ ಜನ ಬೇರೆ ಸಂದರ್ಭದ ಸಾಕ್ಷ್ಯಗಳನ್ನ ಹೇಳಿದ್ರು. ಕಾರಿನ ಒಳಗೆ, ಕೊಲೆಗೆ ಬಳಸಿದ ಚಾಕು ಮೇಲೆ ಇದ್ದ ರಕ್ತ ಸಮಂತಾದೇ ಅಂತ ಸಾಬೀತಾಯ್ತು. ಜೊತೆಗೆ ಘಟನೆ ನಡೆದಾಗ ಹಂತಕ ರೋಲ್ಯಾಂಡ್ ನ ಗರ್ಲ್ ಫ್ರೆಂಡ್ ಆಗಿದ್ದ ಯುವತಿಯ ಮನೆಯ ಹಿಂದೆ ಕಸದ ರಾಶಿಯಲ್ಲಿ ಸಿಕ್ಕ ರೋಲ್ಯಾಂಡ್ ನ ಸಾಕ್ಸ್ ಹಾಗೂ ಹೆಡ್ ಕವರ್ ನಲ್ಲೂ ಸಮಂತಾ ರಕ್ತದ ಕುರುಹುಗಳು ಸಿಕ್ವು. ಸೆಲ್ ಫೋನ್ ಟ್ರಾಕಿಂಗ್ ಡೆಟಾ ಕೂಡ ಅಪರಾಧ ನಡೆದ ಸ್ಥಳ-ಟೈಮ್ ಹಾಗೂ ರೋಲ್ಯಾಂಡ್ ಆಗ ಇದ್ದ ಸ್ಥಳ-ಟೈಮ್ ಸೇಮ್ ಇತ್ತು ಅಂತ ಸಾಬೀತು ಮಾಡ್ತು. ರೋಲ್ಯಾಂಡ್ ನ ಉಗುರಿನಲ್ಲಿ ಸಿಕ್ಕ ಡಿಎನ್ಎ ಸ್ಯಾಂಪಲ್ ಕೂಡ ಸಮಂತಾ ಡಿಎನ್ಎಗೆ ಮ್ಯಾಚ್ ಆಯ್ತು. ಹೀಗಾಗಿ ಈಗ ಕಡೆಗೂ ರೋಲ್ಯಾಂಡ್ ಗೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ.

-masthmagaa.com

Contact Us for Advertisement

Leave a Reply