26 ಸಾವಿರ ಕೋಟಿ ರೂ. ಮೌಲ್ಯದ ಕ್ರಿಪ್ಟೋಕರೆನ್ಸಿ ರಿಕವರಿ! ಎಲ್ಲಿ ಗೊತ್ತಾ?

masthmagaa.com:

ಅಮೆರಿಕದ ಅತಿದೊಡ್ಡ ಕ್ರಿಪ್ಟೊಕರೆನ್ಸಿ ಕಳ್ಳತನ ಪ್ರಕರಣವನ್ನ ಭೇದಿಸಿರೋದಾಗಿ ಅಮೆರಿಕದ ಜಸ್ಟಿಸ್​ ಡಿಪಾರ್ಟ್​ಮೆಂಟ್​ ಹೇಳಿದೆ. ಇದರಲ್ಲಿ ದಾಖಲೆಯ ಸುಮಾರು 26 ಸಾವಿರ ಕೋಟಿ ರೂ ಬೆಲೆಬಾಳುವ ಬಿಟ್‌ಕಾಯಿನ್‌ಗಳನ್ನ ವಶಪಡಿಸಿಕೊಂಡಿದ್ದೇವೆ ಅಂತ ಘೋಷಿಸಿದೆ. ಇಲ್ಯಾ ಲೈಟನ್‌ಸ್ಟೀನ್‌ ಮತ್ತು ಹೆದರ್‌ ಮಾರ್ಗನ್‌ ಎಂಬ ಇಬ್ಬರು ದಂಪತಿಗಳನ್ನು ಅಕ್ರಮವಾಗಿ ಬಿಟ್‌ಕಾಯಿನ್‌ ವರ್ಗಾವಣೆ ಮಾಡುವಾಗ ನ್ಯೂಯಾರ್ಕ್‌ನಲ್ಲಿ ಬಂಧಿಸಲಾಗಿದೆ. ಈ ದಂಪತಿ 2016ರಲ್ಲಿ ಬಿಟ್‌ಫಿನೆಕ್ಸ್‌ ವರ್ಚುವಲ್‌ ಕರೆನ್ಸಿ ಎಕ್ಸ್‌ಚೇಂಜ್‌ ಹ್ಯಾಕ್‌ ಆದಾಗ ಸುಮಾರು 1.2 ಲಕ್ಷ ಬಿಟ್‌ ಕಾಯಿನ್‌ಗಳನ್ನ ಕದ್ದಿದ್ದರು. ಅಂದು ಅವುಗಳ ಮೌಲ್ಯ 481 ಕೋಟಿ ರೂಪಾಯಿಯಾಗಿತ್ತು. ಈ ಸಂಬಂಧ ಹೇಳಿಕೆ ನೀಡಿರುವ ಡೆಪ್ಯುಟಿ ಅಟಾರ್ನಿ ಜನರಲ್‌ ಲಿಸಾ ಮೊನ್ಯಾಕೊ ಇವತ್ತಿನ ಬಂಧನ ಮತ್ತು ದಾಖಲೆಯ ವಶಪಡಿಕೆ ಕ್ರಿಪ್ಟೋಕರೆನ್ಸಿ ಅಪರಾಧಿಗಳಿಗೆ ಸುರಕ್ಷಿತ ಸ್ವರ್ಗವಲ್ಲ ಎಂಬುದನ್ನ ಸೂಚಿಸುತ್ತದೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply