ಅಮೆರಿಕಕ್ಕೆ ವಾರ್ನಿಂಗ್ ಕೊಟ್ಟ ತಾಲಿಬಾನಿಗಳು! ಯಾಕೆ ಗೊತ್ತಾ..?

masthmagaa.com:

ಅಫ್ಘಾನಿಸ್ತಾನವನ್ನು ಅಸ್ಥಿರಗೊಳಿಸಲು ಯತ್ನಿಸಬೇಡಿ ಅಂತ ಅಮೆರಿಕಗೆ ವಾರ್ನಿಂಗ್ ಕೊಟ್ಟಿದ್ದೀವಿ ಅಂತ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮಿರ್ ಖಾನ್ ಮುಟ್ಟಾಕಿ ಹೇಳಿದ್ದಾರೆ. ದೋಹಾದಲ್ಲಿ ತಾಲಿಬಾನಿಗಳು ಮತ್ತು ಅಮೆರಿಕದ ಅಧಿಕಾರಿಗಳ ಜೊತೆಗೆ ಸಭೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಮುಠಾಕಿ, ಅಫ್ಘಾನಿಸ್ತಾನದ ಜೊತೆ ಉತ್ತಮ ಸಂಬಂಧ ಇಟ್ಕೊಂಡ್ರೆ ಎಲ್ಲರಿಗೂ ಒಳ್ಳೆಯದು. ಅಫ್ಘಾನಿಸ್ತಾನದಲ್ಲಿರೋ ಸರ್ಕಾರ ವೀಕ್ ಮಾಡೋಕೆ ನೋಡಬಾರದು. ಇದ್ರಿಂದ ಜನರಿಗೆ ತೊಂದ್ರೆಯಾಗುತ್ತೆ. ಇದ್ರಿಂದ ಯಾರಿಗೂ ಒಳ್ಳೆಯದಾಗಲ್ಲ ಅಂತ ವಾರ್ನಿಂಗ್ ಮಾಡಿದ್ದೀವಿ ಅಂತ ಹೇಳಿದ್ದಾರೆ. ಜೊತೆಗೆ ಅಮೆರಿಕ ಅಫ್ಘಾನಿಸ್ತಾನದ ಜನತೆಗೆ ಕೊರೋನಾ ಲಸಿಕೆ ಅಭಿಯಾನದಲ್ಲಿ ಸಹಾಯ ಮಾಡಲಿದೆ ಅಂತ ಕೂಡ ತಿಳಿಸಿದ್ದಾರೆ. ಆದ್ರೆ ಈ ಬಗ್ಗೆ ಅಮೆರಿಕ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.

-masthmagaa.com

Contact Us for Advertisement

Leave a Reply