ಕೊರೋನಾ ಲಸಿಕೆ ತಜ್ಞನನ್ನೇ ತಂಡದಿಂದ ಕೈಬಿಟ್ಟ ಟ್ರಂಪ್..!

masthmagaa.com:

ಕೊರೋನಾ ವೈರಸ್​ಗೆ ಜಗತ್ತಿನ ವಿವಿಧ ದೇಶಗಳು, ವಿಜ್ಞಾನಿಗಳು ಲಸಿಕೆ ಕಂಡುಹಿಡಿಯುತ್ತಿದ್ದಾರೆ. ಕೊರೋನಾ ಹೊಡೆತಕ್ಕೆ ನಲುಗಿರೋ ಅಮೆರಿಕದಲ್ಲೂ ಸಂಶೋಧನೆಗಳು ನಡೆಯುತ್ತಿವೆ. ಆದ್ರೆ ಈ ಕಾಯಿಲೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಚಿಕಿತ್ಸೆಯನ್ನ ವಿರೋಧಿಸಿದ್ದಕ್ಕಾಗಿ ಲಸಿಕೆ ಅಭಿವೃದ್ಧಿಪಡಿಸುವ ತಂಡದ ಉಸ್ತುವಾರಿ ವಹಿಸಿದ್ದ ವೈದ್ಯನನ್ನೇ ಟ್ರಂಪ್ ಸರ್ಕಾರ ಕೆಲಸದಿಂದ ತೆಗೆದು ಹಾಕಿದೆ.

ಬಯೋಮೆಡಿಕಲ್ ಅಡ್ವಾನ್ಸ್ ರಿಸರ್ಚ್​ ಅಂಡ್ ಡೆವಲಪ್​ಮೆಂಟ್ ಅಥಾರಿಟಿಯ (BARDA) ನಿರ್ದೇಶಕರಾಗಿದ್ದ ಡಾ.ರಿಕ್ ಬ್ರೈಟ್ ಅವರಿಗೆ ಹಿಂಬಡ್ತಿ ನೀಡಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಮಾತನಾಡಿರೋ ಬ್ರೈಟ್, ಸರ್ಕಾರವು BARDAವನ್ನು ರಾಜಕೀಯಗೊಳಿಸುತ್ತಿದೆ. ರಾಜಕೀಯ ಸಂಪರ್ಕ ಹೊಂದಿರುವ ಕಂಪನಿಗಳತ್ತ ಒಲವು ತೋರುವಂತೆ ವಿಜ್ಞಾನಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ಧಾರೆ.

ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಕೊರೋನಾಗೂ ಪರಿಣಾಮಕಾರಿ ಅಂತ ಹೇಳಲಾಗಿದೆ. ಇದರ ಬೆನ್ನಲ್ಲೇ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ರಫ್ತಿನ ಮೇಲೆ ಭಾರತ ಸರ್ಕಾರ ನಿರ್ಬಂಧ ಹೇರಿತ್ತು. ಬಳಿಕ ಡೊನಾಲ್ಡ್ ಟ್ರಂಪ್ ಮನವಿ ಮಾಡಿಕೊಂಡ ಹಿನ್ನೆಲೆ ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಈ ಮಾತ್ರೆಯನ್ನ ರಫ್ತು ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply