ಟ್ಯಾಂಕರ್ ಅಟ್ಯಾಕ್ ವಿಚಾರವಾಗಿ ಇರಾನ್, ಇಸ್ರೇಲ್ ವಾಕ್ಸಮರ!

masthmagaa.com:

ಒಮನ್ ತೀರದ ಅರಬ್ಬಿ ಸಮುದ್ರದಲ್ಲಿ ಇಸ್ರೇಲಿ ಹಡಗಿನ ಮೇಲೆ ನಡೆದ ದಾಳಿ ವಿಚಾರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ತಿದೆ. ಈಗಾಗಲೇ ದಾಳಿ ಹಿಂದೆ ಇರಾನ್ ಕೈವಾಡ ಇದೆ ಅಂತ ಇಸ್ರೇಲ್, ಅಮೆರಿಕ ಮತ್ತು ಯುನೈಟೆಡ್ ಕಿಂಗ್​ಡಮ್ ಆರೋಪಿಸಿವೆ. ನಮ್ದೇ ಆದ ರೀತಿಲಿ ಕ್ರಮ ಕೈಗೊಳ್ತೀವಿ ಅಂತ ಕೂಡ ಇಸ್ರೇಲ್ ಕೆಂಡಕಾರಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಇರಾನ್​​, ಇದ್ರಲ್ಲಿ ನಮ್ಮ ಪಾತ್ರ ಇಲ್ಲ. ಇಂಥಹ ಆಧಾರ ರಹಿತ ಆರೋಪ ಮಾಡೋದು ಬಿಟ್ಟುಬಿಡಿ. ಒಂದ್ವೇಳೆ ನಿಮ್ಮ ಆರೋಪಗಳಿಗೆ ಸಾಕ್ಷ್ಯ ಇದ್ರೆ ಕೊಡಿ ಅಂತ ಹೇಳಿದೆ. ಅದೇ ರೀತಿ ಇರಾನ್ ತನ್ನ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸೋಕೆ ಹಿಂಜರಿಯೋದಿಲ್ಲ. ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ರೀತಿಯ ಅಪಾಯ ಎದುರಿಸಲು ಸಿದ್ಧ ಅಂತ ಕಿಡಿಕಾರಿದೆ. ಅಂದ್ರೆ ನೀವು ಉತ್ತರ ಕೊಟ್ರೆ ಅದಕ್ಕೆ ಮರುತ್ತರ ಕೊಡೋಕೆ ನಾವು ಕೂಡ ರೆಡಿ ಇದೀವಿ ಅಂತ ಹೇಳಿದೆ. ಇನ್ನು ಯುನೈಟೆಡ್​ ಕಿಂಗ್​ಡಮ್​​ನಲ್ಲಿ ಇರಾನ್ ರಾಯಭಾರಿಯಾಗಿರೋ ಮೊಹ್ಸೇನ್ ಬಹರ್ವಂದ್​​​ ಅವರನ್ನು ಫಾರಿನ್, ಕಾಮನ್​ವೆಲ್ತ್​ & ಡೆವೆಲಪ್​ಮೆಂಟ್ ಆಫೀಸ್​​ಗೆ ಬರುವಂತೆ ಸಮನ್ಸ್ ಜಾರಿ ಮಾಡಿದೆ. ಜೊತೆಗೆ ಇರಾನ್ ಈ ಕೂಡಲೇ ಅಂತಾರಾಷ್ಟ್ರೀಯ ಮತ್ತು ಭದ್ರತೆಗೆ ಧಕ್ಕೆಯುಂಟು ಮಾಡುವ ಕ್ರಮಗಳನ್ನು ನಿಲ್ಲಿಸಬೇಕು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಹಡಗುಗಳು ಮುಕ್ತವಾಗಿ ಸಂಚರಿಸಲು ಅನುವು ಮಾಡಿಕೊಡ್ಬೇಕು ಅಂತ ಆಗ್ರಹಿಸಿದೆ. ಅಂದಹಾಗೆ ಜುಲೈ 29ರಂದು ಒಮನ್ ತೀರದಲ್ಲಿ ಇಸ್ರೇಲ್ ಮೂಲದ ಟ್ಯಾಂಕರ್ ಎಂಟಿ ಮೆರ್ಸರ್ ಸ್ಟ್ರೀಟ್​​ ಮೇಲೆ ದಾಳಿ ನಡೆದಿತ್ತು. ಇದ್ರಲ್ಲಿ ಬ್ರಿಟನ್ ಮತ್ತು ರೊಮೇನಿಯಾದ ಒಬ್ಬೊಬ್ಬರು ಪ್ರಜೆಗಳು ಪ್ರಾಣ ಕಳೆದುಕೊಂಡಿದ್ರು.

-masthmagaa.com

Contact Us for Advertisement

Leave a Reply