ದಲಿತ ಬಾಲಕಿ ಮೇಲೆ ಹಲ್ಲೆ: ಭಾರಿ ವಿರೋಧ

masthmagaa.com:

ದುಷ್ಟರ ಗುಂಪೊಂದು ದಲಿತ ಅಪ್ರಾಪ್ತ ಬಾಲಕಿ ಕಳ್ಳತನ ಮಾಡಿದ್ದಾಳೆ ಅಂತ ಆರೋಪಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ. ಇಬ್ಬರು ಬಾಲಕಿಯನ್ನು ಹಿಡ್ಕೊಂಡಿದ್ರೆ, ಮೂರನೇ ವ್ಯಕ್ತಿ ಥಳಿಸಿದ್ದಾನೆ. ಕೂದಲೆಲ್ಲಾ ಹಿಡಿದು ಎಳೆದಾಡಿದ್ದಾನೆ. ಬಾಲಕಿ ನೋವಿನಿಂದ ನರಳುತ್ತಿದ್ರೆ, ಮೂವರು ಮಹಿಳೆಯರು ಬಾಲಕಿಗೆ ಪ್ರಶ್ನೆಗಳನ್ನು ಕೂಡ ಕೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಘಟನೆ ಸಂಬಂಧ ಪೋಸ್ಕೋ ಮತ್ತು ಎಸ್​​ಸಿ\ಎಸ್​ಟಿ ಕಾಯ್ದೆಯಡಿ ಕೇಸ್ ದಾಖಲಿಸಿರೋ ಪೊಲೀಸರು ಈಗಾಗಲೇ ಓವ್ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಈ ಘಟನೆ ನಿಂದಿಸಿರೋ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಈ ಘಟನೆ ಖಂಡನೀಯ. ಯೋಗಿ ಆದಿತ್ಯನಾತ್ ಅವರೇ ನಿಮ್ಮ ರಾಜ್ಯದಲ್ಲಿ ಪ್ರತಿದಿನ ದಲಿತರ ಮೇಲೆ 34 ಮತ್ತು 134 ಮಹಿಳೆಯರ ವಿರುದ್ಧ ದೌರ್ಜನ್ಯ ನಡೀತಾ ಇದೆ. ಆದ್ರೆ ನಿಮ್ಮ ಕಾನೂನು ಸುವ್ಯವಸ್ಥೆ ನಿದ್ದೆ ಮಾಡಿದ್ಯಾ ಅಂತ ಕೆಂಡಕಾರಿದ್ದಾರೆ.

-masthmagaa.com

Contact Us for Advertisement

Leave a Reply