ಹೂಡಿಕೆದಾರರ ಸಂಖ್ಯೆಯಲ್ಲಿ ಗುಜರಾತ್‌ ಹಿಂದಿಕ್ಕಿದ ಉತ್ತರ ಪ್ರದೇಶ!

masthmagaa.com:

ಅತಿಹೆಚ್ಚು ಸ್ಟಾಕ್‌ ಮಾರ್ಕೆಟ್‌ ಹೂಡಿಕೆದಾರರ ಸಂಖ್ಯೆಯಲ್ಲಿ ಉತ್ತರ ಪ್ರದೇಶ ಗುಜರಾತ್‌ನ್ನ ಹಿಂದಕ್ಕಿದೆ. 89.5 ಲಕ್ಷ ಆಕ್ಟೀವ್‌ ಇನ್ವೆಸ್ಟರ್‌ಗಳೊಂದಿಗೆ ಉತ್ತರ ಪ್ರದೇಶ ಈ ದಾಖಲೆ ಬರೆದಿದೆ. ಇದೇ ವೇಳೆ ಗುಜರಾತ್‌ 76.5 ಲಕ್ಷ ಆಕ್ಟೀವ್‌ ಹೂಡಿಕೆದಾರರನ್ನ ಹೊಂದಿದೆ. ಇತ್ತ ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, 1.48 ಕೋಟಿಗೂ ಅಧಿಕ ರೆಜಿಸ್ಟರ್ಡ್‌ ಹೂಡಿಕೆದಾರರನ್ನ ಹೊಂದಿದೆ. ಇನ್ನು ಭಾರತದಲ್ಲಿ ಒಟ್ಟು 8.49 ಕೋಟಿ ಹೂಡಿಕೆದಾರರಿದ್ದು, ಕಳೆದ ವರ್ಷಕ್ಕೆ ಹೋಲಿಸಿದ್ರೆ, 22.4% ಏರಿಕೆಯಾಗಿದೆ.

-masthmagaa.com

Contact Us for Advertisement

Leave a Reply