ಥಯೇಟರ್‌ನಲ್ಲಿ ಒಬ್ಬರಿಗೊಬ್ರು ಕಿತ್ತಾಡಿಕೊಂಡ ತಮಿಳು ಚಿತ್ರ ಅಭಿಮಾನಿಗಳು! ಕಾರಣವೇನು?

masthmagaa.com:

ತಮಿಳು ಸಿನಿಮಾ ರಂಗದ ಸೂಪರ್‌ ಸ್ಟಾರ್‌ ನಟರಾದ ವಿಜಯ್‌ ಅವ್ರ ʻವಾರಿಸುʼ ಮತ್ತು ನಟ ಅಜಿತ್‌ ನಟನೆಯ ʻತುನಿವುʼ ಒಂದೇ ದಿನ ರಿಲೀಸ್‌ ಆಗಿದ್ದು ಇಬ್ಬರು ನಟರ ಅಭಿಮಾನಿಗಳ ನಡುವೆ ಗಲಾಟೆ ಉಂಟಾಗಿದೆ. ಈ ಇಬ್ಬರೂ ನಟರ ಅಭಿಮಾನಿಗಳು ಕಳೆದ ಹದಿನೈದು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡೋ ಮೂಲಕ ಜಗಳ ಆಡ್ತಿದ್ದು, ಇದೀಗ ಥಿಯೇಟರ್‌ನಲ್ಲೇ ಬಡಿದಾಡಿಕೊಂಡಿದ್ದಾರೆ. ಚೆನ್ನೈನ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಮೊದಲು ಅಜಿತ್‌ ಅಭಿಮಾನಿಗಳು ಪೋಸ್ಟರ್‌ ಹರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ ಅಂತ ಹೇಳಲಾಗಿದೆ. ಸುದ್ಧಿ ತಿಳಿದ ನಂತ್ರ ವಿಜಯ್‌ ಅಭಿಮಾನಿಗಳು ಕೂಡ ಅದೇ ಕೆಲಸಕ್ಕೆ ಮುಂದಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್‌ ಮಾಡೋ ಮೂಲಕ ಪರಿಸ್ಥಿತಿಯನ್ನ ನಿಯಂತ್ರಿಸಿದ್ದಾರೆ. ಮಾಹಿತಿಯ ಪ್ರಕಾರ ಮೊದಲಿನಿಂದಲೂ ಈ ಇಬ್ಬರು ನಟರ ಅಭಿಮಾನಿಗಳ ನಡುವೆ ಜಗಳ ನಡೆಯುತ್ತಲೇ ಇದೆ. ಅದ್ರಲ್ಲೂ ಈ ಬಾರಿ ಥಿಯೇಟರ್‌ ವಿಚಾರವಾಗಿ ತುಣಿವು ಮತ್ತು ವಾರಿಸು ನಿರ್ಮಾಪಕರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ವಿಜಯ್‌ ಸಿನಿಮಾಗೆ ಅತಿ ಹೆಚ್ಚು ಚಿತ್ರಮಂದಿರಗಳು ಸಿಕ್ಕಿದ್ದು ಅಜಿತ್‌ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಇದೀಗ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply