ಇಂಪೋರ್ಟೆಡ್​​ ಕಾರಿಗೆ ತೆರಿಗೆ ಕಟ್ಟದ ನಟ ವಿಜಯ್​ಗೆ ಭಾರಿ ಮುಖಭಂಗ

masthmagaa.com:

ಇಂಗ್ಲೆಂಡ್​ನಿಂದ ಆಮದು ಮಾಡಿಕೊಂಡ ರೋಲ್ಸ್​ ರಾಯ್ಸ್ ಘೋಸ್ಟ್​ ಕಾರಿಗೆ ಎಂಟ್ರಿ ಟ್ಯಾಕ್ಸ್​ ಕಟ್ಟದ ತಮಿಳು ನಟ ವಿಜಯ್ ಅವರನ್ನ ಮದ್ರಾಸ್ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ತಮ್ಮ ಐಷಾರಾಮಿ ಕಾರಿಗೆ ಎಂಟ್ರಿ ಟ್ಯಾಕ್ಸ್​ನಿಂದ ವಿನಾಯ್ತಿ ಕೊಡುವಂತೆ 2012ರಲ್ಲಿ ನಟ ವಿಜಯ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಯನ್ನ ವಜಾ ಮಾಡಿರೋ ಕೋರ್ಟ್​, ವಿಜಯ್​ಗೆ 1 ಲಕ್ಷ ದಂಡ ವಿಧಿಸಿದೆ. ಈ ಹಣ ತಮಿಳುನಾಡು ಸಿಎಂ ಪರಿಹಾರ ನಿಧಿಗೆ, ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿದೆ. ಜೊತೆಗೆ ಇಂಥಾ ಆ್ಯಕ್ಟರ್​​ಗಳನ್ನ ಅಭಿಮಾನಿಗಳು ಹಿರೋಗಳ ರೀತಿ ನೋಡ್ತಾರೆ. ಆದ್ರೆ ನಟ-ನಟಿಯರೇ ಸಿಎಂ ಆಗಿರೋ ತಮಿಳುನಾಡಿನಲ್ಲಿ ಓರ್ವ ನಟ ರೀಲ್​ ಹಿರೋ ಥರ ವರ್ತಿಸುತ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರಲ್ಲ. ತೆರಿಗೆ ವಂಚನೆ ದೇಶ ವಿರೋಧಿ ವರ್ತನೆ ಮತ್ತು ಮನಸ್ಥಿತಿಯಾಗಿದೆ. ಸಿನಿಮಾಗಳಲ್ಲಿ ಸಾಮಾಜಿಕ ನ್ಯಾಯ ತರಲು ಈ ನಟರು ಚಾಂಪಿಯನ್ಸ್ ರೀತಿ ಬಿಂಬಿಸಿಕೊಳ್ತಾರೆ. ಅವರ ಸಿನಿಮಾಗಳು ಭ್ರಷ್ಟಾಚಾರ ವಿರುದ್ಧವಾಗಿರುತ್ತೆ. ಆದ್ರೆ ಅಂಥವರೇ ತೆರಿಗೆ ವಂಚಿಸಿ ಈ ರೀತಿ ವರ್ತಿಸಿದ್ರೆ ಹೇಗೆ ಅಂತ ಕೋರ್ಟ್​ ಚಾಟಿ ಬೀಸಿದೆ. ಜೊತೆಗೆ ಎರಡು ವಾರದೊಳಗೆ ಕಾರಿನ ಎಂಟ್ರಿ ಟ್ಯಾಕ್ಸ್​ ಅನ್ನ ಕಟ್ಟುವಂತೆ ವಿಜಯ್​​ಗೆ ಸೂಚಿಸಿದೆ. ರೋಲ್ಸ್​ ರಾಯ್ಸ್ ಘೋಸ್ಟ್​ ಕಾರಿನ ಒಟ್ಟು ಮೊತ್ತದಲ್ಲಿ 20 ಪರ್ಸೆಂಟ್ ಅನ್ನ ತೆರಿಗೆಯಾಗಿ ಕಟ್ಟಬೇಕು ನಟ ವಿಜಯ್​. ದೆಹಲಿಯಲ್ಲೀಗ ಈ ಕಾರಿನ ಎಕ್ಸ್​ ಶೋ ರೂಂ ಪ್ರೈಸ್​ 6 ಕೋಟಿಯಿಂದ ಶುರುವಾಗುತ್ತೆ. ಆದ್ರೆ ಇಂಗ್ಲೆಂಡ್​​ನಿಂದ ತರಿಸಿದ್ರೆ ಕಮ್ಮಿಯಾಗುತ್ತೆ.

-masthmagaa.com

Contact Us for Advertisement

Leave a Reply