ವಿಕ್ರಮ್‌ ಲ್ಯಾಂಡರ್‌ನ್ನ ಯಶಸ್ವಿಯಾಗಿ ಸಂಪರ್ಕಿಸಿದ ನಾಸಾ ಗಗನ ನೌಕೆ!

masthmagaa.com:

ಸ್ಲೀಪ್‌ ಮೋಡ್‌ಗೆ ಜಾರಿರೋ ಚಂದ್ರಯಾನ-3 ಮಿಷನ್‌ನ ವಿಕ್ರಮ್‌ ಲ್ಯಾಂಡರ್‌ ಜೊತೆಗೆ ಇದೀಗ ನಾಸಾದ ಗಗನನೌಕೆ ಸಂಪರ್ಕ ಸಾಧಿಸಿದೆ. ಚಂದ್ರನ ಕಕ್ಷೆಯಲ್ಲಿರೋ ನಾಸಾ ಗಗನನೌಕೆಯ ಲೇಸರ್‌ ಉಪಕರಣವೊಂದು ವಿಕ್ರಮ್‌ ಲ್ಯಾಂಡರ್‌ಗೆ ಸಿಗ್ನಲ್‌ ಕಳಿಸುವಲ್ಲಿ ಯಶಸ್ವಿಯಾಗಿದೆ ಅಂತ ಅಮೆರಿಕದ ಸ್ಪೇಸ್‌ ಏಜೆನ್ಸಿ ನಾಸಾ ಹೇಳಿದೆ. ಚಂದ್ರನ ಕಕ್ಷೆಯಲ್ಲಿರೋ ಲೂನಾರ್‌ ರೆಕಾನಸನ್ಸ್‌ ಆರ್ಬಿಟರ್‌ (Lunar Reconnaissance Orbiter-LRO) ಮತ್ತು ವಿಕ್ರಮ್‌ ಲ್ಯಾಂಡರ್‌ನಲ್ಲಿರೋ ಪುಟ್ಟದಾದ ಡಿವೈಸ್‌ ಮಧ್ಯೆ ಲೇಸರ್‌ ಬೀಮ್‌ನ್ನ ಟ್ರಾನ್ಸ್ಮಿಟ್‌ ಮತ್ತು ಬೌನ್ಸ್‌ ಮಾಡಲಾಗಿದೆ. ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ನಡೆಸಲಾದ ಈ ಸಂಪರ್ಕವನ್ನ ನಾಸಾ ಮಹತ್ವದ ಬೆಳವಣಿಗೆ ಅಂತ ಕರೆದಿದೆ. ಯಾಕಂದ್ರೆ ಚಂದ್ರನ ಮೇಲ್ಮೈನಲ್ಲಿರೋ ಟಾರ್ಗೆಟ್‌ಗಳನ್ನ ಅಥ್ವಾ ವಸ್ತುಗಳನ್ನ ನಿಖರವಾಗಿ ಪತ್ತೆ ಹಚ್ಚೋಕೆ ಸಾಧ್ಯವಾಗಿರೋದ್ರಿಂದ, ಈ ಟೆಕ್ನಿಕ್‌ ಮುಂದಿನ ಪರಿಶೋಧನೆಗಳಿಗೆ ಹೆಲ್ಪ್‌ ಆಗಲಿದೆ ಎಂದಿದೆ. ಅಂದ್ಹಾಗೆ ನಾಸಾದ ಲೇಸರ್‌ ಉಪಕರಣ LRO ಇಂದ ಹತತ್ರ 100 ಕಿಮೀ ದೂರದಲ್ಲಿರೋ ವಿಕ್ರಮ್‌ ಲ್ಯಾಂಡರ್‌ಗೆ ಡಿಸೆಂಬರ್‌ 12 ರಂದು ಲೇಸರ್‌ ಪಲ್ಸ್‌ ಕಳುಹಿಸಲಾಗಿತ್ತು.

-masthmagaa.com

Contact Us for Advertisement

Leave a Reply