ಬನ್ನೇರುಘಟ್ಟ ಉದ್ಯಾನವನ: ವೈರಸ್‌ ಸೋಂಕಿನಿಂದ 7 ಮರಿ ಚಿರತೆ ಸಾವು

masthmagaa.com:

ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದಲ್ಲಿ ʻಪೆಲಿನ್ ಪ್ಯಾನ್ಲೂಕೋಪೇನಿಯಾʼ (Feline panleukopenia) ಅನ್ನೊ ವೈರಸ್‌ಗೆ 7 ಚಿರತೆ ಮರಿಗಳು ಬಲಿಯಾಗಿವೆ . ಬೆಕ್ಕಿನಿಂದ ಹರಡುವ‌ ರೋಗ ಇದಾಗಿದ್ದು, ಆಗಸ್ಟ್‌ 22ರಂದು ಉದ್ಯಾನದ ಚಿರತೆ ಮರಿಗಳಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಸೆಪ್ಟೆಂಬರ್ 5ರ ವೇಳೆಗೆ 7 ಮರಿಗಳು ಸಾವಿಗೀಡಾಗಿವೆ. ಇನ್ನು ಸೋಂಕು ತಗುಲಿದ ಪ್ರಾಣಿಗಳಲ್ಲಿ ಆಹಾರ ಜೀರ್ಣವಾಗದೆ ರಕ್ತ ಬೇದಿಯಾಗುತ್ತದೆ. ಬಳಿಕ ಬಿಳಿ ರಕ್ತಕಣಗಳು ಕಡಿಮೆಯಾಗಿ ನಿಶ್ಯಕ್ತಿಯಿಂದ ಮೃತಪಡುತ್ತವೆ ಅಂತ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

 

Contact Us for Advertisement

Leave a Reply