ಶಶಿಕಲಾಗೆ ಸೇರಿದ 100 ಕೋಟಿ ರೂಪಾಯಿ ಮೊತ್ತದ ಆಸ್ತಿ ಜಪ್ತಿ!

masthmagaa.com:

ಎಐಡಿಎಂಕೆ ಉಚ್ಚಾಟಿತ ನಾಯಕಿ ಹಾಗೂ ತಮಿಳುನಾಡಿನ ದಿ.ಸಿಎಂ ಜಯಲಲಿತಾ ಆಪ್ತೆ ವಿ. ಕೆ ಶಶಿಕಲಾ ಅವರಿಗೆ ಸಂಬಂಧ ಪಟ್ಟ 100 ಕೋಟಿ ಮೌಲ್ಯದ 11 ಆಸ್ತಿಯನ್ನ ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಚೆನೈನ ಹೊರವಲಯದ ಸಿರುತಾವೂರ್‌ ಬಳಿಯ ಪಯ್ಯನೂರಿನಲ್ಲಿರೋ ಈ ಆಸ್ತಿಯನ್ನು 1991ರಿಂದ 1996ರ ಸಂದರ್ಭದಲ್ಲಿ ಜಯಲಲಿತಾ ಸಿಎಂ ಆಗಿದ್ದಾಗ ಶಶಿಕಲಾ 20 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ರು. ಈಗ ಅದ್ರ ಬೆಲೆ 100 ಕೋಟಿ. ಆದ್ರೆ 2014ರಲ್ಲಿ ಕರ್ನಾಟಕ ವಿಶೇಷ ಕೋರ್ಟ್‌ ಶಶಿಕಲಾ ವಿರುದ್ಧದ ಪ್ರಕರಣದಲ್ಲಿ ತೀರ್ಪು ನೀಡುವಾಗ ಇದು ನ್ಯಾಯಯುತವಾಗಿ ಮಾಡಿದ ಆಸ್ತಿಯಲ್ಲ ಅಂತ ಹೇಳಿತ್ತು. ಅದ್ರ ಆಧಾರದಲ್ಲಿ ಈಗ ಈ ಆಸ್ತಿಯನ್ನು ಐಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

-masthmagaa.com

Contact Us for Advertisement

Leave a Reply