ಶತ್ರುವಿನ ಶತ್ರು ಜೊತೆ ಚೀನಾ ಫ್ರೆಂಡ್​​ಶಿಪ್​​!

masthmagaa.com:

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಇರಾನ್ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಉಭಯ ದೇಶಗಳು 25 ವರ್ಷಗಳ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಿವೆ ಅಂತ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ಇರಾನ್​​ನಲ್ಲಿ ಇಂಧನ, ಮೂಲಭೂತ ಸೌಕರ್ಯ ಸೇರಿದಂತೆ ಕೆಲವೊಂದು ಪ್ರಮುಖ ವಲಯಗಳಲ್ಲಿ ಚೀನಾ ಬಂಡವಾಳ ಹೂಡಿಕೆ ಒಪ್ಪಂದಕ್ಕೂ ಚೀನಾ ಸಹಿ ಹಾಕೋ ಸಾಧ್ಯತೆ ಇದೆ.

ಅಂದಹಾಗೆ 2016ರಲ್ಲಿ ಚೀನಾ ಇರಾನ್​​​ನ ಅತಿದೊಡ್ಡ ವ್ಯಾಪಾರಿ ಪಾಲುದಾರ ದೇಶವಾಗಿತ್ತು. ಜೊತೆಗೆ ಮುಂದಿನ ಒಂದು ದಶಕದಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 10 ಪಟ್ಟು ಜಾಸ್ತಿ ಮಾಡಲು ಉಭಯದೇಶಗಳು ಒಪ್ಪಿಕೊಂಡಿದ್ದವು. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಈ ಎರಡೂ ದೇಶಗಳು ಅಮೆರಿಕದ ಕೆಲವು ನಿರ್ಬಂಧಗಳಿಗೆ ಒಳಪಟ್ಟಿವೆ. ಅಂದ್ರೆ ಇಲ್ಲಿ ಚೀನಾ ಶತ್ರುವಿನ ಶತ್ರು ಮಿತ್ರ ಅನ್ನೋ ಕಾನ್ಸೆಪ್ಟ್​​​​ ಅಡಿ ಮುಂದೆ ಸಾಗ್ತಾ ಇದೆ ಅಂತ ಅರ್ಥ.

-masthmagaa.com

Contact Us for Advertisement

Leave a Reply